ಎಂದು ನಿನ್ನೆದೆಯು ದುರಭಿಮಾನದ ಅಂಚಿಂದ ಬಿಡುಗಡೆಯಾಗುವುದೋ,
ಅಂದು ನೀ ಕಾಣುವೆ ನಿರ್ಜರ ಪ್ರಿಯಕರನ.
ನಿನ್ನ ನೀ ಕಾಣೆ ಕನ್ನಡಿಯಿಲ್ಲದೇ;
ನೋಡು ಪ್ರಿಯತಮನ, ಆತನೇ ಆ ಪ್ರಜ್ವಲ ಕನ್ನಡಿ.
-----------
ನಿನ್ನ ಪ್ರೇಮ ನನ್ನಾತ್ಮವ ದೇಹದಿಂದೆತ್ತಿ ಆಗಸಕ್ಕೊಯ್ಯುವುದು
ಮತ್ತು ನೀ ನನ್ನ ಈ ಎರಡೂ ಲೋಕದಿಂದ ಹೊರಗೆತ್ತುವೆ.
ನನ್ನಾಸೆ ನಿನ್ನಾ ರವಿ ಕಿರಣ ನನ್ನ ಮಳೆಹನಿಗಳ ಮೇಲೆ ಹರಡಿ,
ಆ ಬಿಸಿಯಿಂದ ನನ್ನಾತ್ಮವ ಹಗುರಾಗಿಸಿ ಮೇಲಕ್ಕೇರಿಸಬೇಕು ಮೋಡದಂತೆ.
ಕನ್ನಡಕ್ಕೆ - ಭಾರತಿ ದೇವಿ
From Thief of Sleep by Shahram Shiva
