Tuesday, June 16, 2009

ಶಿಶಿರ ಬಯಲು

ಒಂದರಿಂದೊಂದು ಎಷ್ಟು ದೂರ
ಈ ಮರಗಳು ಎಂದು
ಶಿಶಿರನಾಗಮನಕ್ಕೆ ಕಾದು
ಬೆತ್ತಲಾಗಿ ನಿಂತಿದ್ದಾಗ ಅರಿವಾಯಿತು.

ವಸಂತದಲ್ಲಿ ಮತ್ತೆ ಚಿಗುರಿ
ಮೈತುಂಬಿ ಪುನಃ
ನಿಜವನ್ನು ಮರೆಮಾಚುತ್ತಾ, ಒಂದಕ್ಕೊಂದು ಹೊಸೆದು
ತಾವು ಒಂದೇಯೆಂದು
ಕಚಕುಳಿಯಿಡುತ್ತವೆ,
ಪುನಃ ಶಿಶಿರ ಬರುವ ತನಕ.