Tuesday, June 16, 2009

ನನ್ನ ಪ್ರೇಮ ಪ್ರಕರಣ

ಅದೊಂದು ಚಿಕ್ಕ ಗಿಡವಾಗಿತ್ತು.
ಉತ್ಸಾಹದಿಂದ ಹಾಕಿದೆ ನೀರು, ಗೊಬ್ಬರ
ಬೆಳೆಯುವ ಎಲ್ಲಾ ಲಕ್ಶಣಗಳೂ ಕಂಡುವು.
ಒಂದು ದಿನ
ಅಕಸ್ಮಾತ್ ಎಲೆ ಕಳಚ ಹತ್ತಿತು.
ಗೊಬ್ಬರ ಸಾಲದೇನೋ...
ಹಾಕಿದೆ,
ಚಿಗುರಿತು ಪುನಃ.

ಗೊಬ್ಬರ, ನೀರು ತಪ್ಪದೆ ಹಾಕುತಿರೆ-
ಪುನಃ ಕಳಚಿತು ತನ್ನ ತಾನೆ ಎಲೆಗಳಿಂದ.
ಕೊಳೆಯ ಹತ್ತಿತು ಕಾಂಡ.
ಎಲ್ಲಿ ತಪ್ಪಿದೆ ನಾನು?

ಈಗಲೂ ಹಾಕುತ್ತಿದ್ದೇನೆ ನೀರು,
ಕೊಳೆತ ಪಳೆಯಳಿಕೆಗೆ
ಸಂಪೂರ್ಣ ನಾಶವಾಗುತ್ತಿದೆ ಆ ಗಿಡ...
ಎಲ್ಲಿ ತಪ್ಪಿದೆ ನಾನು?