"Today in America , sexism is worse than racism" ಇದು ಕಾಲೇಜಿನಲ್ಲಿರುವ ನನ್ನ ಮಗ ಮಧುರನ ಹೇಳಿಕೆ. ಅದು ಅವನು ದಿನಾ ಗಮನಿಸುತ್ತಿರುವ ಅವನ ಗೆಳತಿಯರ ಪರಿಸ್ಥಿತಿಯನ್ನ ನೋಡಿ ಅಂದ ಮಾತು. ಇದು ನನ್ನ ಅನುಭವ ಕೂಡ. ಇದಕ್ಕೆ ನಮ್ಮ ರಾಜಕೀಯದ ದೊಡ್ಡ ದೃಷ್ಟಾಂತ ಇತ್ತೀಚಿಗೆನ ಚುನಾವಣೆಯಲ್ಲಿ ನಡೆದದ್ದು. ಹೆಚ್ಚು ಅರ್ಹತೆ, ಅನುಭವ, ಹಾಗೂ ಪ್ರೈಮರಿಯಲ್ಲಿ ಹೆಚ್ಚು ಓಟು ಬಂದಾಗ್ಯೂ ಹಿಲರಿ ಕ್ಲಿಂಟನ್ ನ ಬದಲು ಒಬಾಮನನ್ನು ಡೆಮೋಕ್ರೇಟಿಕ್ ಪಾರ್ಟಿ ಯ ಪ್ರತಿನಿಧಿಯಾಗಿ ಆರಿಸಿದ್ದು. ಈ ದೇಶ ಒಬ್ಬ ಕರಿಯರನ್ನ ಅಧ್ಯಕ್ಷನಾಗಿ ಚುನಾಯಿಸುವ ವರೆಗೆ ಮುಂದುವರಿದರೂ, ಇನ್ನೂ ಒಬ್ಬ ಹೆಂಗಸನ್ನು ತನ್ನನ್ನು ಆಳಲು ಎಡೆ ಮಾಡುವಷ್ಟು ಮುಂದುವರಿದಿಲ್ಲ. ಲೋಕದಲ್ಲಿಯೆ ಅತ್ಯಂತ ಮುಂದುವರಿದ ದೇಶಗಳಲ್ಲಿ ಒಂದಾದ ಅಮೆರಿಕಾದಲ್ಲಿ ಇಂದು ತರಾವರಿ ಇಸ್ಮ್ ಯಾನೆ ಪಕ್ಷಪಾತ ಗಳಿವೆ. ರೇಸಿಸ್ಮ್, ಸೆಕ್ಸಿಸ್ಮ್, ವಯಸ್ಕರ ಪಕ್ಷಪಾತ, ಸಲಿಂಗ ಪ್ರೇಮಿಗಳ ಎದುರು ಪಕ್ಷಪಾತ, ಗರ್ಭಪಾತದ ಎದುರು ರಕ್ತಪಾತ, ಇತ್ಯಾದಿ, ಇತ್ಯಾದಿ.
ಅನಾದಿಕಾಲದಿಂದಲೂ, ಬಲವಂತ ಮನುಷ್ಯ ದುರ್ಬಲರನ್ನು ತನ್ನ ಸ್ವಾರ್ಥಕಾಗಿ ದುರುಪಯೋಗ ಮಾಡಿದ ಉದಾಹರಣೆ ಇತಿಹಾಸದ ಎಲ್ಲೆಲ್ಲೂ ಕಾಣಸಿಗುತ್ತವೆ. ಗುಲಾಮಗಿರಿಯೂ ಹಳೆಯ ಕಾಲದಿಂದಲೂ ಚೀನ, ಜಪಾನ್, ಈಜಿಪ್ಟ್, ಮದ್ಯಪ್ರಾಚ್ಯ ದೇಶಗಳು, ಆಫ್ರಿಕ, ಯೂರೋಪ್, ಹಾಗೂ ಅಮೇರಿಕದಲ್ಲಿತ್ತು ಎಂದು ಲಿಖಿತವಾಗಿದೆ. ಆಫ್ರಿಕಾದಲ್ಲಿ ಸಮುದ್ರಕಳ್ಳರು ಗುಲಾಮರನ್ನು ಖರೀದಿಸುತ್ತಿದ್ದರು. ಈಜಿಪ್ಟ್ ನಲ್ಲಿ ಪಿರಮಿಡ್ ಗಳನ್ನು ಕಟ್ಟಲು ಬಳಸಿದ್ದು ಗುಲಾಮರನ್ನು. ೧೭೭೪ ರಿಂದ ೧೮೨೪ ರ ವರೆಗೆ ಮಡಗಾಸ್ಕರ್ ಒಂದು ಅಮೇರಿಕನ್ನರಿಗೆ ಮತ್ತು ಸಮುದ್ರಕಳ್ಳರಿಗೆ ಇಷ್ಟವಾದ ಗುಲಾಮರ ಮಾರಾಟದ ಜಾಗವಾಗಿತ್ತು. ಅಮೆರಿಕಾದಲ್ಲಿ ರೇಸಿಸ್ಮ್ ಬಹುಶ ವಸಾಹತುಶಾಹಿ ಕಾಲದಿಂದ ಇಲ್ಲಿಗೆ ಬಂದ ಐರೋಪ್ಯದ ಬಿಳಿ ಜನರಿಂದಾಗಿ ಉಂಟಾಗಿ ಅದರಿಂದ ಹೆಚ್ಚಿನ ತೊಂದರೆಗೊಳಗಾದವರು ಮೊದಲು ಇಂಡಿಯನ್ ಎಂದು ಕರೆಯಲಾಗುವ ಇಲ್ಲಿಯದೇ ದೇಶಿಯ ಅಮೆರಿಕಾದವರು(Native Americans), ಕಪ್ಪಿನವರು ಯಾನೆ ಆಫ್ರಿಕಾದ ಮೂಲದ ವಾಸಿಗಳು (African Americans), ಏಶ್ಯಾದ ಮೂಲದ ಜನರು, ದಕ್ಷಿಣ ಅಮೆರಿಕಾದ ಮೂಲದವರು (hispanics), ಅಮೇರಿಕಾದ ಜ್ಯೂವಿಶ್ ಜನರು, ಐರಿಶ್ ಮೂಲದವರು, ಹಾಗೂ ಇತರ ಕೆಲ ಹೊರ ದೇಶದ ಜನರು. ರೇಸಿಸ್ಮ್ ಅನ್ನು ೨೦ನೇ ಶತಮಾನದಲ್ಲಿ ಯೇ ಹೊರಹಾಕುವ ಎಲ್ಲಾ ಕಟ್ಟು ನಿಟ್ಟುಗಳನ್ನು ಮಾಡಿದ್ದರೂ, ಅದು ಇನ್ನೂ ಹೋಗಿಲ್ಲಾ. ಇದರಲ್ಲಿ ಆಫ್ರಿಕಾದ ಮೂಲದವರಂತೂ ಬಹಳೇ ತೊಂದರೆಗೊಳಗಾಗಿದ್ದರು, ಈಗಲೂ ಆಗುತ್ತಿದ್ದಾರೆ. ’ರೇಸಿಅಲ್ ಸ್ಟೀರಿಯೋ ಟೈಪಿಂಗ” ಎಂಬುದು ಬಹಳ ಸಾಮಾನ್ಯವಾಗಿ ಕಾಣುವಂತಹ ವಿಚಾರ.
ವಸಾಹತುಶಾಹಿ ಕಾಲದಿಂದ ಹತ್ತಿ ಮತ್ತು ಹೊಗೆಸೊಪ್ಪಿನ ಕೃಷಿ ಕೆಲಸಕ್ಕೆಂದು ಆಫ್ರಿಕಾದ ಮೂಲದ ಜನರನ್ನು ಉಪಯೋಗಿಸಿದಂದಿನಿಂದ ಶುರುವಾದ ಗುಲಾಮಗಿರಿ ಈಗ ಕಾಣಿಸದಿದ್ದರೂ, ಕಪ್ಪಿನವರಿಗೆ ಈಗಲೂ ಸರಿಯಾದ ನ್ಯಾಯ ಸಿಗದಿರುವ ಸಂಭವ ಜಾಸ್ತಿಯೇ ಅನ್ನಬಹುದು. ಆ ಗುಲಾಮಗಿರಿ ಹೆಚ್ಚಿದ್ದ ಅಮೇರಿಕಾದ ಕೆಲ ದಕ್ಶಿಣದ ಪ್ರಾಂತ್ಯಗಳಲ್ಲಿ ಇನ್ನೂ ಅವರ ವಿರುದ್ದ ಪಕ್ಷಪಾತ ಕಾಣಬಹುದು. ಪ್ರಸ್ತುತ ಅಮೇರಿಕಾದಲ್ಲಿ ಹೇಳುವುದಾದಲ್ಲಿ, ರೇಸಿಸ್ಮ್ ಹೆಚ್ಚಾಗಿ ಬೈಬಲ್ ಬೆಲ್ಟ್ ಪ್ರಾಂತ್ಯ ಗಳು ಎಂದು ಕರೆಯಲಾಗುವ ದಕ್ಶಿಣದ ಈ ಕೆಲವು ಪ್ರಾಂತ್ಯಗಳಲ್ಲಿ ಇದು ಜಾಸ್ತಿ ಎನ್ನಬಹುದು. ಈ ಕೆಲವು ದಕ್ಶಿಣದ ಪ್ರಾಂತ್ಯಗಳಲ್ಲಿ ಜಾಸ್ತಿಯಾಗಿ ಕ್ರಿಸ್ಚಿಯನ್ ಚರ್ಚ್ ಗಳಿದ್ದು, ಇವರು ಹೆಚ್ಚಾಗಿ ಸಂಪ್ರದಾಯಸ್ತರಿದ್ದು, ಗುಲಾಮಗಿರಿ ಹಾಗೂ ವರ್ಣ ಭೇದವನ್ನು ತೊಡೆದು ಹಾಕುವ ವಿರುದ್ದ ಹೋರಾಡಿದ ಪ್ರಾಂತ್ಯಗಳೂ ಆಗಿವೆ. ಇವುಗಳಲ್ಲಿ ನಾನು ಸುಮಾರು ಇಪ್ಪತ್ತು ವರ್ಷ ವಾಸವಾಗಿದ್ದ ಟೆಕ್ಸಾಸ್ ಪ್ರಾಂತ್ಯದ ಕೆಲವು ಭಾಗಗಳೂ ಸೇರಿವೆ.
ಇಲ್ಲಿ ಇನ್ನೂ ರೇಸಿಸ್ಮ್ ಇದೆಯೆಂಬುದಕ್ಕೆ ಉದಾಹರಣೆ ೧೯೯೮ ರ ಜೂನ್ ೭ ರಂದು ಟೆಕ್ಸಾಸ್ ನ ಜಾಸ್ಪರ್ ಎಂಬಲ್ಲಿ ನಡೆದ ಕರುಣಾಮಯ ಘಟನೆ. ಟೆಕ್ಸಾಸ್ ಈ ರೇಸಿಸ್ಮ್ ತುಂಬಿದ ಹಳೆ ದಕ್ಷಿಣ ಪ್ರಾಂತ್ಯಗಳ ಹೊರಬದಿಯ ಪರಿಧಿಯಲ್ಲಿದ್ದಾಗ್ಯೂ, ಇನ್ನೂ ಅಲ್ಲಿಯ ರೇಸಿಸ್ಮ್ ನ ರಕ್ತಪಾತ ಚರಿತ್ರೆ ಮುಂದುವರಿಯುತ್ತಲೇ ಇದೆ. ಆ ಜೂನ್ ನ ಕರಾಳ ದಿನದಂದು ೪೯ ವಯಸ್ಸಿನ ಆಫ್ರಿಕಾದ ಮೂಲದ ಜೇಮ್ಸ್ ಬೈಯ್ರ್ಡ್, ಜೂನಿಯರ್ ಎಂಬವ ಬೆರ್ರಿ (೨೩ ವಯಸ್ಸು), ಬ್ರೂವರ್ (೩೧), ಮತ್ತು ಕಿಂಗ್ (೨೩) ಎಂಬ ಮೂರು ಬಿಳಿಯವರಿಂದ ಮನೆಗೆ ಹೋಗಲು ಅವರ ಪಿಕ್ ಅಪ್ ಟ್ರಕ್ ನಲ್ಲಿ ರೈಡ್ ತೆಕ್ಕೊಂಡ. ಆದರೆ, ಆ ಮೂವರು, ಆತನನ್ನು ಅವನ ಮನೆ ಕಡೆ ಸಾಗಿಸುವ ಬದಲು, ಒಂದು ಅಂಗಡಿಯ ಹಿಂದೆ ಕೊಂಡೊಯ್ದು ಅವನನ್ನ ಬೆತ್ತಲು ಮಾಡಿ, ಕಾಲಿಗೆ ಚೈನ್ ಹಾಕಿ ಅದರ ಇನ್ನೊಂದು ಕೊನೆಯನ್ನ ಅವರ ಪಿಕ್ ಅಪ್ ಟ್ರಕ್ ಗೆ ಕಟ್ಟಿ ಸುಮಾರು ಮೂರು ಮೈಲಿ ದೂರ ಮಾರ್ಗದಲ್ಲಿ ಎಳೆದು ಕೊಂಡು ಹೋದರು. ಜೇಮ್ಸ್ ನ ಕತ್ತನ್ನು ಮೊದಲೇ ಕುಯ್ಯಲಾಗಿತ್ತೆಂದು ಬ್ರೂವರ್ ಆ ಮೇಲೆ ಹೇಳಿಕೆ ಕೊಟ್ಟರೂ, ಫಾರೆಂಸಿಕ್ ಸಾಕ್ಷಿ ಪ್ರಕಾರ ಜೇಮ್ಸ್ ಎಳೆದುಕೊಂಡುಹೋಗುವಾಗ ಹೆಚ್ಚಿನಂಶ ಜೀವವಿದ್ದು, ತನ್ನ ಕತ್ತನ್ನು ಮೇಲೆತ್ತಲು ಪ್ರಯತ್ನಿಸುತ್ತಿದ್ದ ಎಂದು ಕಂಡು ಬಂತು. ಹೀಗೆ ಸೆಳೆದು ಕೊಂಡು ಹೋಗುವಾಗ ಅವನು ಸತ್ತಿದ್ದು ಅವನ ತಲೆ ಮತ್ತು ಬಲ ಕೈ ರಸ್ತೆಯ ಒಂದು ಚರಂಡಿಗೆ ಸಿಕ್ಕು ಹಾಕಿ ದೇಹದಿಂದ ಬೇರ್ಪಡೆಯಾದಾಗ. ಇಷ್ಟೇ ಸಾಲದು ಅಂತಾ, ಆತನ ತುಂಡರಿಸಿದ ಭಾಗಗಳನ್ನ ಕಪ್ಪಿನವರನ್ನು ಹೂಳುವ ಶ್ಮಶಾನಕ್ಕೊಯ್ದು ಬಿಸಾಕಿ ಆ ಮೂವರು ಪಟ್ಟಾಗಿ ಬಾರ್ಬೇಕ್ಯೂ ತಿನ್ನಲು ಹೋದರು. ಇವರಲ್ಲಿ ಇಬ್ಬರು ’ವೈಟ್ ಸುಪ್ರೆಮಿಸಿಶ್ಟ್’ ಎಂಬ, ಬಿಳಿಯರೇ ಮೇಲು ಎಂಬ ಧೋರಣೆಯಿದ್ದು ಇಂತಹ ವರ್ಣಭೇದ ಅಕೃತ್ಯ ( Hate crime) ಕಾರ್ಯಾಚರಣೆಯಲ್ಲಿ ತೊಡಗಿರುವ, ಒಂದು ಗುಂಪಿಗೆ ಸೇರಿದವರಾಗಿದ್ದರು. ಈಗ ಈ ಗುಂಪನ್ನು ಬಹೀಕರಿಸಿದ್ದರೂ, ಇನ್ನೂ ಅಲ್ಲಲ್ಲಿ ಅವುಗಳ ಪಳೆಯುಳಿಕೆ ಕಾಣುತ್ತವೆ. ಅದರ ಸದಸ್ಯನೆನ್ನುವ ಒಬ್ಬಾತ ಒಬಾಮರನ್ನು ಸಾಯಿಸಲೂ ನೋಡಿದ್ದ ಇತ್ತೀಚೆಗಿನ ಚುನಾವಣೆಗೆ ಸ್ವಲ್ಪ ಮೊದಲು.

ಜೇಮ್ಸ್ ಬೈಯ್ರ್ಡ್, ಜೂನಿಯರ್ (ಮೇ ೨, ೧೯೪೯ – ಜೂನ್ ೭, ೧೯೯೮).
ಇನ್ನು ಸಲಿಂಗ ಪ್ರೇಮಿಗಳ ವಿರುದ್ದದ ಕ್ರೂರ ಅಕೃತ್ಯಗಳನ್ನು ಹೇಳುವುದಾದಲ್ಲಿ ೧೭ರ ವಯಸ್ಸಿನ ಮ್ಯಾತ್ಯು ಶೆಪರ್ಡ್ (Matthew Shepard) ನಷ್ಟು ಒಳ್ಳೆ ಉದಾಹರಣೆ ಬೇರಿಲ್ಲ. ವಯೋಮಿಂಗ್ ನ ಯೂನಿವರ್ಸಿಟಿಯಲ್ಲಿ (University of Wyoming)ವಿದ್ಯಾರ್ಥಿಯಾದ ಮ್ಯಾತ್ಯು ಒಬ್ಬ ಗೇ. ೧೯೯೮ ರ ಒಕ್ಟೋಬರನಲ್ಲಿ ನಡೆದ ಈ ಬಾರ್ಬರ ಕೃತ್ಯ ಹೊಸ ಹೊಸ ಕಾನೂನುಗಳನ್ನು ಜಾರಿಗೊಳಿಸಲು ಹೇತುವಾಯಿತು. ಮ್ಯಾತ್ಯುವನ್ನು ಮೊದಲು ನೋಡಿದ್ದು ಆ ಕಡೆಯಿಂದ ಹೋಗುತ್ತಿದ್ದ ಒಬ್ಬ ಸೈಕಲ್ ಸವಾರ. ಒಂದು ಬೇಲಿಯಲ್ಲಿ ನೇತು ಹಾಕಿ ಕಟ್ಟಿದ್ದ ಮುದ್ದೆ ಮುದ್ದೆಯಾಗಿದ್ದ ದೇಹ ಅವನಿಗೆ ಮೊದಲು ಗದ್ದೆಯಲ್ಲಿ ನೆಡುವ ಕಾಗೆ ಓಡಿಸಲು ಕಟ್ಟುವ ಬೆರ್ಚಪ್ಪನಂತೆ ಕಾಣಿಸಿತಂತೆ. ಹತ್ತಿರ ಹೋಗಿ ಪರಿಶೀಲಿಸಿದಾಗ, ಸಿಕ್ಕಾಬಟ್ಟೆ ಹೊಡೆತದಿಂದ ಜರ್ಜರಿತವಾದ, ಸುಟ್ಟು ಹೋದ, ಅರೆ ಜೀವದ ದೇಹವಾಗಿತ್ತದು. ಆ ದೇಹ ಸುಮಾರು ಹದಿನೆಂಟು ಗಂಟೆ ಅಲ್ಲಿ ನೇತು ಬಿದ್ದಿತ್ತು. ಅವನನ್ನು ಅಲ್ಲಿ ಬೇಲಿಗೆ ಕಟ್ಟಿ, ಅವನ ಜೇಬು ಖಾಲಿ ಮಾಡಿ, ಅವನ ಪಾದರಕ್ಷೆ ತೆಗೆದು, ಮಾರಾಮಾರಿ ಹೊಡೆದು ಬಿಡಲಾಗಿತ್ತು ಕೊರೆಯುವ ಚಳಿಯಲ್ಲಿ, ಅವನನ್ನ ಆ ಸೈಕಲ್ ಸವಾರ ೧೮ ಗಂಟೆಯ ನಂತರ ನೋಡುವ ವರೆಗೂ. ಇದಾಗಿ ಐದು ದಿನಗಳ ನಂತರ, ಒಕ್ಟೋಬರ್ ೧೨ ರಂದು, ತಲೆಗೆ ಇದ್ದ ಅತೀವ ಪೆ
ಟ್ಟಿನಿಂದಾಗಿ ಮ್ಯಾತ್ಯುವು ಆಸ್ಪತ್ರೆಯೊಂದರಲ್ಲಿ ಮರಣಹೊಂದಿದ. ಈ ಕೃತ್ಯ ಬೆರ್ಚಪ್ಪನಿಗಿಂತಲೂ, ಶಿಲುಬೆಗೇರಿಸಿದ ರೂಪಕಕ್ಕೆ ಹೆಚ್ಚು ಹೋಲಿಕೆ ಯಾಗಿದೆಯೆಂದು ಹಲ ಗೇ ಕಾರ್ಯಕರ್ತರು ಅಭಿಪ್ರಾಯಿಸುತ್ತಾರೆ. ಈ ಕೃತ್ಯವ ಎಸಗಿದವರು ಆರನ್ ಮೆಕಿನ್ನಿ ಮತ್ತು ರಸ್ಸೆಲ್ ಹೆಂಡರ್ಸನ್. ನೋಡಲು ಸಣಕಲಾಗಿದ್ದ ಕಲಿಯುವುದರಲ್ಲಿ ಜಾಣನಿದ್ದ, ೫ ಅಡಿ ೨ ಇಂಚಿನ ೧೦೫ ಪೌಂಡಿನ ಮ್ಯಾತ್ಯು ತುಂಬಾ ಸಾಧು ಸ್ವಭಾವಿತನಾಗಿದ್ದು, ಮನುಷ್ಯರ ಹಕ್ಕುಬಾಧ್ಯಗಳಿಗಾಗಿ ಭಾವೋದ್ದೀಪ್ತನಾಗಿದ್ದ. ಇವನ ನೆನಪಿಗಾಗಿ ಹೆಚ್ಚಿನ ಮಾಹಿತಿಯುಳ್ಳ ವೆಬ್ ಸೈಟ್ ಒಂದನ್ನು ರಚಿಸಲಾಗಿದೆ.
ಮ್ಯಾತ್ಯು ಶೆಪರ್ಡ್ (ಡಿಸೆಂಬರ್ ೧, ೧೯೭೬- ಒಕ್ಟೋಬರ್ ೧೨, ೧೯೯೮).
ಇನ್ನು ಗರ್ಭಪಾತದ ವಿರೋಧಿಗಳ ಅಕೃತ್ಯಗಳ ನೋಡಿದರೆ ಅವರು ಹೋರಾಡುವ ಉದ್ದ್ಯೆಶವೇ ಮರೆತಿದೆಯೋ ಎಂಬಂತೆ ತೋರುತ್ತದೆ. ಅವರು ಹೇಳಿ ಕೊಳ್ಳುವುದು ಗರ್ಭದಲ್ಲಿರುವ ಭ್ರೂಣ ಒಂದು ಜೀವ. ಆದ್ದರಿಂದ ಗರ್ಭಪಾತ ಒಂದು ಕೊಲೆ ಅಂತಾ. ಈ ನೆವದಲ್ಲಿ, ಈ ಗುಂಪುಗಳು ಎಷ್ಟೊ ಕಡೆ ಗರ್ಭಪಾತದ ಕ್ಲಿನಿಕ್ ಗಳಿಗೆ ಬಾಂಬ್ ಹಾಕಿ ಎಷ್ಟೊ ನಷ್ಟ ಹಾಗೂ ಹಲ ಜನರ ಮೃತ್ಯುವಿಗೆ ಕಾರಣರಾಗಿದ್ದಾರೆ. ಇದರಲ್ಲಿ ಇತ್ತೀಚಿಗಿನದು ಇದೇ ಮೇ ತಿಂಗಳಲ್ಲಿ ಕಾನ್ಸಾಸ್ ನಲ್ಲಿ ನಡೆದ ಅಬೋರ್ಶನ್ ಡಾಕ್ಟರ್ ಡಾ ಜೋರ್ಜ್ ಟಿಲ್ಲರ್ ಎಂಬವನ ಹಾಡಹಗಲೇ ಚರ್ಚಿನಲ್ಲಿ ಗುಂಡಿಟ್ಟು ನಡೆದ ಕೊಲೆ.
ಅಮೆರಿಕಾದಲ್ಲಿ ೨೧ ವಾರಗಳ ನಂತರ ಗರ್ಭಪಾತ ಮಾಡುವ ಮೂರರಲ್ಲಿ ಒಂದಾದ ಇವನ ಕ್ಲಿನಿಕ್, ಗರ್ಭಪಾತದ ವಿರೋಧಿ ಡಿಬೇಟಿಗೆಲ್ಲ ಯಾವಾಗಲೂ ಒಂದು ಕೆಂದ್ರ ಬಿಂದುವಾಗಿತ್ತು. ಇಂತಹ ಗುಂಪುಗಳಲ್ಲಿರುವವರು ಹೆಚ್ಚಾಗಿ ಕೇತೊಲಿಕ್ ಕ್ರಿಸ್ಚಿಯನರು ಹಾಗೂ ರಿಪಬ್ಲಿಕನ್ನರು.
ಇನ್ನು ಸಲಿಂಗ ಪ್ರೇಮಿಗಳ ವಿರುದ್ದದ ಕ್ರೂರ ಅಕೃತ್ಯಗಳನ್ನು ಹೇಳುವುದಾದಲ್ಲಿ ೧೭ರ ವಯಸ್ಸಿನ ಮ್ಯಾತ್ಯು ಶೆಪರ್ಡ್ (Matthew Shepard) ನಷ್ಟು ಒಳ್ಳೆ ಉದಾಹರಣೆ ಬೇರಿಲ್ಲ. ವಯೋಮಿಂಗ್ ನ ಯೂನಿವರ್ಸಿಟಿಯಲ್ಲಿ (University of Wyoming)ವಿದ್ಯಾರ್ಥಿಯಾದ ಮ್ಯಾತ್ಯು ಒಬ್ಬ ಗೇ. ೧೯೯೮ ರ ಒಕ್ಟೋಬರನಲ್ಲಿ ನಡೆದ ಈ ಬಾರ್ಬರ ಕೃತ್ಯ ಹೊಸ ಹೊಸ ಕಾನೂನುಗಳನ್ನು ಜಾರಿಗೊಳಿಸಲು ಹೇತುವಾಯಿತು. ಮ್ಯಾತ್ಯುವನ್ನು ಮೊದಲು ನೋಡಿದ್ದು ಆ ಕಡೆಯಿಂದ ಹೋಗುತ್ತಿದ್ದ ಒಬ್ಬ ಸೈಕಲ್ ಸವಾರ. ಒಂದು ಬೇಲಿಯಲ್ಲಿ ನೇತು ಹಾಕಿ ಕಟ್ಟಿದ್ದ ಮುದ್ದೆ ಮುದ್ದೆಯಾಗಿದ್ದ ದೇಹ ಅವನಿಗೆ ಮೊದಲು ಗದ್ದೆಯಲ್ಲಿ ನೆಡುವ ಕಾಗೆ ಓಡಿಸಲು ಕಟ್ಟುವ ಬೆರ್ಚಪ್ಪನಂತೆ ಕಾಣಿಸಿತಂತೆ. ಹತ್ತಿರ ಹೋಗಿ ಪರಿಶೀಲಿಸಿದಾಗ, ಸಿಕ್ಕಾಬಟ್ಟೆ ಹೊಡೆತದಿಂದ ಜರ್ಜರಿತವಾದ, ಸುಟ್ಟು ಹೋದ, ಅರೆ ಜೀವದ ದೇಹವಾಗಿತ್ತದು. ಆ ದೇಹ ಸುಮಾರು ಹದಿನೆಂಟು ಗಂಟೆ ಅಲ್ಲಿ ನೇತು ಬಿದ್ದಿತ್ತು. ಅವನನ್ನು ಅಲ್ಲಿ ಬೇಲಿಗೆ ಕಟ್ಟಿ, ಅವನ ಜೇಬು ಖಾಲಿ ಮಾಡಿ, ಅವನ ಪಾದರಕ್ಷೆ ತೆಗೆದು, ಮಾರಾಮಾರಿ ಹೊಡೆದು ಬಿಡಲಾಗಿತ್ತು ಕೊರೆಯುವ ಚಳಿಯಲ್ಲಿ, ಅವನನ್ನ ಆ ಸೈಕಲ್ ಸವಾರ ೧೮ ಗಂಟೆಯ ನಂತರ ನೋಡುವ ವರೆಗೂ. ಇದಾಗಿ ಐದು ದಿನಗಳ ನಂತರ, ಒಕ್ಟೋಬರ್ ೧೨ ರಂದು, ತಲೆಗೆ ಇದ್ದ ಅತೀವ ಪೆ
ಟ್ಟಿನಿಂದಾಗಿ ಮ್ಯಾತ್ಯುವು ಆಸ್ಪತ್ರೆಯೊಂದರಲ್ಲಿ ಮರಣಹೊಂದಿದ. ಈ ಕೃತ್ಯ ಬೆರ್ಚಪ್ಪನಿಗಿಂತಲೂ, ಶಿಲುಬೆಗೇರಿಸಿದ ರೂಪಕಕ್ಕೆ ಹೆಚ್ಚು ಹೋಲಿಕೆ ಯಾಗಿದೆಯೆಂದು ಹಲ ಗೇ ಕಾರ್ಯಕರ್ತರು ಅಭಿಪ್ರಾಯಿಸುತ್ತಾರೆ. ಈ ಕೃತ್ಯವ ಎಸಗಿದವರು ಆರನ್ ಮೆಕಿನ್ನಿ ಮತ್ತು ರಸ್ಸೆಲ್ ಹೆಂಡರ್ಸನ್. ನೋಡಲು ಸಣಕಲಾಗಿದ್ದ ಕಲಿಯುವುದರಲ್ಲಿ ಜಾಣನಿದ್ದ, ೫ ಅಡಿ ೨ ಇಂಚಿನ ೧೦೫ ಪೌಂಡಿನ ಮ್ಯಾತ್ಯು ತುಂಬಾ ಸಾಧು ಸ್ವಭಾವಿತನಾಗಿದ್ದು, ಮನುಷ್ಯರ ಹಕ್ಕುಬಾಧ್ಯಗಳಿಗಾಗಿ ಭಾವೋದ್ದೀಪ್ತನಾಗಿದ್ದ. ಇವನ ನೆನಪಿಗಾಗಿ ಹೆಚ್ಚಿನ ಮಾಹಿತಿಯುಳ್ಳ ವೆಬ್ ಸೈಟ್ ಒಂದನ್ನು ರಚಿಸಲಾಗಿದೆ.ಮ್ಯಾತ್ಯು ಶೆಪರ್ಡ್ (ಡಿಸೆಂಬರ್ ೧, ೧೯೭೬- ಒಕ್ಟೋಬರ್ ೧೨, ೧೯೯೮).
ಇನ್ನು ಗರ್ಭಪಾತದ ವಿರೋಧಿಗಳ ಅಕೃತ್ಯಗಳ ನೋಡಿದರೆ ಅವರು ಹೋರಾಡುವ ಉದ್ದ್ಯೆಶವೇ ಮರೆತಿದೆಯೋ ಎಂಬಂತೆ ತೋರುತ್ತದೆ. ಅವರು ಹೇಳಿ ಕೊಳ್ಳುವುದು ಗರ್ಭದಲ್ಲಿರುವ ಭ್ರೂಣ ಒಂದು ಜೀವ. ಆದ್ದರಿಂದ ಗರ್ಭಪಾತ ಒಂದು ಕೊಲೆ ಅಂತಾ. ಈ ನೆವದಲ್ಲಿ, ಈ ಗುಂಪುಗಳು ಎಷ್ಟೊ ಕಡೆ ಗರ್ಭಪಾತದ ಕ್ಲಿನಿಕ್ ಗಳಿಗೆ ಬಾಂಬ್ ಹಾಕಿ ಎಷ್ಟೊ ನಷ್ಟ ಹಾಗೂ ಹಲ ಜನರ ಮೃತ್ಯುವಿಗೆ ಕಾರಣರಾಗಿದ್ದಾರೆ. ಇದರಲ್ಲಿ ಇತ್ತೀಚಿಗಿನದು ಇದೇ ಮೇ ತಿಂಗಳಲ್ಲಿ ಕಾನ್ಸಾಸ್ ನಲ್ಲಿ ನಡೆದ ಅಬೋರ್ಶನ್ ಡಾಕ್ಟರ್ ಡಾ ಜೋರ್ಜ್ ಟಿಲ್ಲರ್ ಎಂಬವನ ಹಾಡಹಗಲೇ ಚರ್ಚಿನಲ್ಲಿ ಗುಂಡಿಟ್ಟು ನಡೆದ ಕೊಲೆ.
ಅಮೆರಿಕಾದಲ್ಲಿ ೨೧ ವಾರಗಳ ನಂತರ ಗರ್ಭಪಾತ ಮಾಡುವ ಮೂರರಲ್ಲಿ ಒಂದಾದ ಇವನ ಕ್ಲಿನಿಕ್, ಗರ್ಭಪಾತದ ವಿರೋಧಿ ಡಿಬೇಟಿಗೆಲ್ಲ ಯಾವಾಗಲೂ ಒಂದು ಕೆಂದ್ರ ಬಿಂದುವಾಗಿತ್ತು. ಇಂತಹ ಗುಂಪುಗಳಲ್ಲಿರುವವರು ಹೆಚ್ಚಾಗಿ ಕೇತೊಲಿಕ್ ಕ್ರಿಸ್ಚಿಯನರು ಹಾಗೂ ರಿಪಬ್ಲಿಕನ್ನರು.ಜೋರ್ಜ್ ಟಿಲ್ಲರ್ ( ಆಗಸ್ಟ್ ೮, ೧೯೪೧-ಮೇ ೩೧, ೨೦೦೯).
ಬಿಳಿಯೇತರರು ಹಾಗೂ ಹೆಂಗಸರನ್ನೊಳಗೊಂಡ ಮೈನಾರಿಟಿ ವರ್ಗಕ್ಕೆ ಸೇರಿದ ಹೆಂಗಸರಿಗಿನ್ನೂ ಗಂಡಸಿನಷ್ಟೆ ಸಮವಾಗಿ ಸಂಬಳ ಹಾಗೂ ಅವಕಾಶ ಸಿಗುವ ಸಮಯ ಇನ್ನೂ ಬಂದಿಲ್ಲ ಇಲ್ಲಿ. ಇತ್ತೀಚಿಗೆನೆ ವರದಿ ಪ್ರಕಾರ ಎಲ್ಲಾ ಅರ್ಹತೆ ಒಂದೇ ಇದ್ದಾಗ್ಯೂ ಹೆಂಗಸಿನ ಸಂಬಳ ಗಂಡಸಿಗಿಂತ ಸಾಮಾನ್ಯವಾಗಿ ೨೫% ಕಡಿಮೆಯಿರಬಹುದು. ಭಾರತದಲ್ಲಿ ವಯಸ್ಕರಿಗೆ ಅವರ ಅನುಭವಕ್ಕೆ ನಾವು ಹೆಚ್ಚು ಮರ್ಯಾದೆ ಕೊಟ್ಟಲ್ಲಿ, ಇಲ್ಲಿ ಅದರ ವಿರುದ್ದ. ಇಲ್ಲಿ ಗಂಡಸರಿಗೆ, ಚಿಕ್ಕವರಿಗೆ, ಹೆಚ್ಚು ಮಾತು ಬುರುಕರಿಗೆ, ಸುಂದರ ಹುಡುಗಿಯರಿಗೆ ಪ್ರಾಶಸ್ತ್ಯ ಜಾಸ್ತಿ. ಇಷ್ಟರ ವರೆಗಿದ್ದ ವಯಸ್ಸಿನ ಪಕ್ಷಪಾತದ ಎದುರಿನ ಕೆಲವು ನಿಯಮಗಳನ್ನ , ಕಂಪೆನಿಗಳಿಗೆ ಅನುಕೂಲವಾಗುವ ಹಾಗೆ ಸಡಿಲು ಮಾಡಿದ್ದರಿಂದ ವಯಸ್ಕರಿಗೆ ಈ ಪಕ್ಷಪಾತದ ಎದುರು ಹೊಡೆದಾಡಲು ಇದ್ದ ಬರೇ ಸ್ವಲ್ಪ ಅವಕಾಶವನ್ನೂ ಇನ್ನೂ ಕಡಿಮೆ ಮಾಡಲಾಗಿದೆಯೆಂದು ಕಳೆದ ವಾರವಷ್ಟೆ ನಮ್ಮ ಲಾಸ್ ಏಂಜಲೀಸ್ ಟೈಮ್ಸ್ ನಲ್ಲಿ ಓದಿದೆ.
ಇವನ್ನೆಲ್ಲಾ ನೋಡುವಾಗ, ಅನ್ನಿಸುತ್ತದೆ ನಾವಿನ್ನೂ ನಿಜವಾಗಿಯೂ ಅಷ್ಟು ಮುಂದಿಲ್ಲ, ನಾವಂದು ಕೊಂಡಂತೆ, ಜಗತ್ತು ಅಂದು ಕೊಂಡಂತೆ.