ಇದು ಈ ಗಿನ ಕಾಲದಲ್ಲಿ ಕೆಲವರಿಗೆ ಗೆಳೆತನದ ಫೌಂಡಶನ್ ಇಲ್ಲಾ, ಗೆಳೆತನ ಬೆಳೆಯಲು ಬೇಕಾದ ಪೌಶ್ಟಿಕ ಅಹಾರ. ನನ್ನ ಅನುಭವದಂತೆ, ಇದು ಹೆಂಗಸರಲ್ಲಿ ಸ್ವಲ್ಪ ಜಾಸ್ತಿ. ಒಂದು ವೇಳೆ ನೀವು ಅದಕ್ಕೆ ಅನುಮೋದನೆ ಕೊಡದಿದ್ದಲ್ಲಿ, ನಿಮ್ಮ ಗೆಳೆತನ ಮೊಳಕೆಯಲ್ಲೇ ಕುದುರಿ ಹೋಗುವ ಸಂಭವ ಇದೆ. ಒಂದೆರಡು ಬೆಳೆಯುವ ಪೊಟೆಂಶಿಯಲ್ ಇದ್ದ ಗೆಳೆತನಗಳು ಹೀಗೆ ಮುರಿದದ್ದರಿಂದ, ಈಗ ಮೌನವಾಗಿ ಅಂತಹ ಈಮೇಲ್ ಗಳನ್ನ ಕಸದ ಬುಟ್ಟಿಗೆ ಸೀದಾ ವರ್ಗಾಯಿಸುತ್ತೇನೆ. ಸ್ಪಾಮ್ ನ ನಿಜ ವಿವರಣೆಯ ಪ್ರಕಾರ ಇದು ಸ್ಪಾಮ್ ಅಲ್ಲದಿದ್ದರೂ, ನಾನು ಇದನ್ನು ಒಂದು ಕೋಟಲೆಯ ಕೀಟ ಅಂತ ಪರಿಗಣಿಸುತ್ತೇನೆ.
ಇನ್ನು ಸ್ಪಾಮ್ ಎಂದರೇನು , ನೀವು ಕೇಳದೇ, ನಿಮಗೆ ಆಸಕ್ತಿಯಿಲ್ಲದೇ, ನೀವು ಮೊದಲು ವ್ಯವಹಾರ ಮಾಡದ (ನ್ಯಾಯವಾದ ಅಥವಾ ಮೋಸದ) ಕಂಪೆನಿಗಳಿಂದ ಬರುವ ಈಮೇಲುಗಳು. ಅದು ನ್ಯಾಯವಾದ ಕಂಪೆನಿ ಯದಾದರೆ, ಕಳಿಸ ಬೇಡಿ ಎಂದು ಹೇಳಿದರೆ ಅವರು ನಿಲ್ಲಿಸುತ್ತಾರೆ. ಆದರೆ, ಹೆಚ್ಚಾಗಿ, ಇಂತಹ ಈಮೇಲ್ ಗಳು ಮೋಸಗಾರರು ಅಜ್ನಾನಿಗಳನ್ನು, ಮುಗ್ಧ ಜನರನ್ನು ಮೋಸ ಮಾಡಲು ಕಳಿಸುವಂತಾದ್ದು. ಸ್ವಲ್ಪ ಸಮಯದ ಹಿಂದೆ ಅಮೇರಿಕದಲ್ಲಿ ಇದರ ಹಾವಳಿ ಅತಿಯಾಗಿತ್ತು. ಹೆಚ್ಚಾಗಿ, ಆಫ್ರಿಕಾದಿಂದ ಬರುವ ಈ ಈಮೇಲ್ ಗಳು, ’ನೀವೊಂದು ದೊಡ್ಡ ಮೊತ್ತಕ್ಕೆ ವಾರಾಸುದಾರರಾಗಿದ್ದೀರಿ. ಈ ಮೊತ್ತವನ್ನು ಇಂತಹ ಒಂದು ಬ್ಯಾಂಕ್ ನಲ್ಲಿ ಇಡಲಾಗಿದೆ. ಇದನ್ನು ನಿಮ್ಮ ಖಾತೆಗೆ ವರ್ಗಾಯಿಸಲು, ಇಷ್ಟು ದುಡ್ಡನ್ನು ವೈರ್ ಮಾಡಿ ಕೂಡಲೇ ಕಳಿಸಿ’ ಅಂತಾ ಬರೆದಿರುತ್ತವೆ. ಇದರಿಂದ ಮೋಸ ಹೋದ ಜನ ಬಹಳ.
ಇವರಿಗೆಲ್ಲಾ ನಿಮ್ಮ ಈಮೇಲ್ ವಿಳಾಸ ಹ್ಯಾಗೆ ಗೊತ್ತಾಗುತ್ತೆ ಅಂದಿರಾ? ಇಂಟರ್ನೆಟ್ ಹೊಸದರಲ್ಲಿ, ನೀವು ಯೂಸ್ ನೆಟ್ ನ ಯಾವುದೇ ಪಬ್ಲಿಕ್ ಡಿಸ್ಕಶ್ಶನ್ ಗ್ರೂಪ್ ಅಥವ ಬುಲ್ಲೆಟಿನ್ ಬೋರ್ಡ್ಗಳಲ್ಲಿ ಭಾಗವಹಿಸಿದರೆ ಸಾಕಿತ್ತು. ಆದರೆ ಈಗ, ನಿಮ್ಮ ವಿಳಾಸ ವೆಬ್ ಪೇಜ್ ಗಳಿಂದ ಸಿಗುವುದು: ಎಲ್ಲೆಲ್ಲಿ ಹೋಗಿ ನೀವು ನಿಮ್ಮ ಈಮೇಲ್ ಬಿಟ್ಟಿರುತ್ತೀರೊ, ಅಲ್ಲೆಲ್ಲ ಗೂಗಲ್, ಯಾಹೂ ಮೊದಲಾದ ಸರ್ಚ್ ಎಂಜಿನ್ ಗಳು ನಿಮ್ಮನ್ನು ಕಂಡು ಹಿಡಿಯುತ್ತವೆ! ಸರ್ಚ್ ಎಂಜಿನ್ ಗಳಿಗೆ ಸಿಗುವಂತಾದ್ದು ಎಲ್ಲರಿಗೂ ಸಿಗುತ್ತೆ, ಅದರಲ್ಲೂ ಮುಖ್ಯವಾಗಿ ಸ್ಪಾಮ್ಮರುಗಳಿಗೆ.
ಇವರುಗಳು ಪ್ರತಿಯೊಂದೂ ವೆಬ್ ಸೈಟ್ ಗೆ ಹೋಗಿ ಸ್ಕಾನರ್ ಎಂಬ ಸಾಫ್ಟವೇರ್ ಗಳನ್ನು ಉಪಯೋಗಿಸಿ ಈಮೇಲ್ ವಿಳಾಸಗಳನ್ನು ಕೃಷಿ ಮಾಡುತ್ತಾರೆ. ಇಲ್ಲಾ ನಿಮ್ಮಂತೆಯೆ ಮೊದಲು ಯಾರದ್ದಾದರೂ ಈಮೇಲ್ ವಿಳಾಸ ಇದ್ದಲ್ಲಿ, ಅದನ್ನು ಉಪಯೋಗಿಸುತ್ತಾರೆ. ಇನ್ನೊಂದು ವಿಧ ನಿಘಂಟು ಶೊಧನೆ (Dictionary Search) . ಇದರಲ್ಲಿ ಯಾವುದೋ ಯಾಹೂ, ಜಿಮೇಲ್ ನಂತಹ ಡೊಮೈನ್ ಹೆಸರು ಉಪಯೊಗಿಸಿ, ’” ದಿಂದ ಪ್ರಾರಂಭಿಸಿ, ಎಲ್ಲ ಹೆಸರಿನಲ್ಲಿ ಈಮೇಲ್ ಕಳಿಸುಹುದು. ಅದು ಹಿಂದೆ ಬಾರದಿದ್ದಲ್ಲಿ, ಆ ವಿಳಾಸ ನಿಜವಾಗಿಯೂ ಇದೆಯೆಂದರ್ಥ. ಇದಕ್ಕೋಸ್ಕರವೇ ಸಾಫ್ಟ್ ವೇರ್ ಬರೆದಿರುತ್ತಾರೆ ಇದರ ಕೃಷಿಕರು. ಈಗ ಇದನ್ನು ಕೃಷಿ ಮಾಡುವುದೇ ಒಂದು ದೊಡ್ಡ ವ್ಯವಹಾರವಾಗಿದೆ. ಉಳಿದ ಸ್ಪಾಮಿಗರು ಇಂತಹರಿಂದ ವಿಳಾಸಗಳನ್ನು ದುಡ್ಡಿಗೆ ಪಡೆದು ಕೊಳ್ಳುತ್ತಾರೆ.
ಇವರುಗಳು ಪ್ರತಿಯೊಂದೂ ವೆಬ್ ಸೈಟ್ ಗೆ ಹೋಗಿ ಸ್ಕಾನರ್ ಎಂಬ ಸಾಫ್ಟವೇರ್ ಗಳನ್ನು ಉಪಯೋಗಿಸಿ ಈಮೇಲ್ ವಿಳಾಸಗಳನ್ನು ಕೃಷಿ ಮಾಡುತ್ತಾರೆ. ಇಲ್ಲಾ ನಿಮ್ಮಂತೆಯೆ ಮೊದಲು ಯಾರದ್ದಾದರೂ ಈಮೇಲ್ ವಿಳಾಸ ಇದ್ದಲ್ಲಿ, ಅದನ್ನು ಉಪಯೋಗಿಸುತ್ತಾರೆ. ಇನ್ನೊಂದು ವಿಧ ನಿಘಂಟು ಶೊಧನೆ (Dictionary Search) . ಇದರಲ್ಲಿ ಯಾವುದೋ ಯಾಹೂ, ಜಿಮೇಲ್ ನಂತಹ ಡೊಮೈನ್ ಹೆಸರು ಉಪಯೊಗಿಸಿ, ’” ದಿಂದ ಪ್ರಾರಂಭಿಸಿ, ಎಲ್ಲ ಹೆಸರಿನಲ್ಲಿ ಈಮೇಲ್ ಕಳಿಸುಹುದು. ಅದು ಹಿಂದೆ ಬಾರದಿದ್ದಲ್ಲಿ, ಆ ವಿಳಾಸ ನಿಜವಾಗಿಯೂ ಇದೆಯೆಂದರ್ಥ. ಇದಕ್ಕೋಸ್ಕರವೇ ಸಾಫ್ಟ್ ವೇರ್ ಬರೆದಿರುತ್ತಾರೆ ಇದರ ಕೃಷಿಕರು. ಈಗ ಇದನ್ನು ಕೃಷಿ ಮಾಡುವುದೇ ಒಂದು ದೊಡ್ಡ ವ್ಯವಹಾರವಾಗಿದೆ. ಉಳಿದ ಸ್ಪಾಮಿಗರು ಇಂತಹರಿಂದ ವಿಳಾಸಗಳನ್ನು ದುಡ್ಡಿಗೆ ಪಡೆದು ಕೊಳ್ಳುತ್ತಾರೆ.
ಇನ್ನು ಫಿಶಿಂಗ್ (phishing) ಅಂದರೇನು? ಇದು fishing ಯಾನೆ ಜಾಲ ಹಾಕುವುದುಎಂಬ ಪದದಿಂದ ಬಂದಿದ್ದು. ಇದರರ್ಥ: ಯಾವುದೇ ನ್ಯಾಯ ವಲ್ಲದ, ಮೋಸದ ರೀತಿಯಲ್ಲಿ ನಿಮ್ಮ ಯೂಸರ್ ನೇಮ್, ಪಾಸ್ ವರ್ಡ್, ಕ್ರೆಡಿಟ್ ಕಾರ್ಡ್ ನಂಬರ್, ಇತ್ಯಾದಿ ನಿಮ್ಮ ಸೂಕ್ಷ್ಮ ವಿವರಗಳನ್ನು ಜಾಲ ಹಾಕಿ ಪಡೆಯುವುದು. ಇದನ್ನೂ ಈಮೇಲ್ ಹಾಗೂ ಇನ್ಸ್ಟಂಟ್ ಮೆಸ್ಸೆಂಜೆರ್ ಬಳಸಿ ಪಡೆಯಲಾಗುತ್ತೆ.
ಇದನ್ನು ತಡೆಯುವುದು ಬಹಳ ಕಷ್ಟ. ಆದರೆ, ನೀವೀ ಮೋಸಕ್ಕೆ ತುತ್ತಾಗದ ಹಾಗೆ ಜಾಗ್ರತೆ ವಹಿಸಿ ಕೊಳ್ಳಬಹುದು ಕೆಲವು ಕ್ರಮಗಳನ್ನು ಅನುಸರಿಸಿದಲ್ಲಿ. ಅವುಗಳಲ್ಲಿ ಮುಖ್ಯವಾಗಿ,
೧) ನಿಮಗೆ ಗೊತ್ತಿಲ್ಲದೆ ಕಡೆಗಳಿಂದ ಬರುವ ಈಮೇಲ್ ಕಂಪೆನಿಗಳಿಂದ ಏನೂ ಖರೀದಿ ಮಾಡ ಕೂಡದು. ಯಾಕಂದರೆ, ಹೆಚ್ಚಿನವುಗಳು ಮೋಸ.
೨) ಇಂತಹ ಈಮೇಲ್ ಗಳಿಗೆ ಉತ್ತರಿಸಲೇ ಕೂಡದು. ಆದರಲ್ಲಿರುವ ಯಾವ ಲಿಂಕ್ ನ ಮೇಲೂ ಕ್ಲಿಕ್ ಮಾಡಲೇ ಕೂಡದು. ಅಂತಹ ಈಮೇಲ್ ಗಳಲ್ಲಿ, ’ನಿಮಗೆ ಇಲ್ಲಿಂದ ಮುಂದೆ ಈಮೇಲ್ ಬರುವುದು ಬೇಡದಲ್ಲಿ ಇಲ್ಲಿ ಕ್ಲಿಕ್ ಮಾಡ” ಎಂದು ಇದ್ದಲ್ಲಿ ಸಹಿತ ಕ್ಲಿಕ್ ಮಾಡ ಬೇಡಿ.
೩) ’ನಿಮಗೆ ಏನೋ ಬಹುಮಾನ ಬಂದಿದ” ಅಥವಾ ’ನೀವು ಈ ಲಾಟರಿ ಗೆದ್ದಿದ್ದೀರ” ಅಥವ ’ನಿಮಗೆ ಯಾರೋ ಆಸ್ತಿ ಯಾನೆ ತುಂಬಾ ದುಡ್ಡು ಬಿಟ್ಟು ಹೊಗಿದ್ದಾರೆ, ಅದನ್ನು ನಿಮಗೆ ವರ್ಗಾಯಿಸಲು ಬೇಂಕ್ ಫೀಸ್ ಇಷ್ಟು ಕಳಿಸ’,...ಎಂಬೆಲ್ಲ ಈಮೇಲ್ ಗಳನ್ನು ಸೀದಾ ಕಸದಬುಟ್ಟಿಗೆ ವರ್ಗಾಯಿಸಿ. ನೆನಪಿಡಿ: ಉದಾರವಾಗಿ ಯಾರೂ ಏನೂ ಕೊಡುವುದಿಲ್ಲ!
೪) ನಿಮ್ಮ ಬ್ಯಾಂಕ್ ನಂತೇ ಎಲ್ಲ ಲೋಗೋ ಗಳನ್ನು ಹೊಂದಿದ್ದು, ಈ ಮೋಸದ ಈಮೇಲ್ ಗಳು, ’ನಾವು ನಮ್ಮ ಅಕೌಂಟ್ ಸಿಸ್ಟಮ್ ಬದಲಾಯಿಸುತ್ತಿದ್ದೇವೆ. ಆದ್ದರಿಂದ ಇಲ್ಲಿ ಕ್ಲಿಕ್ ಮಾಡಿ ನಿಮ್ಮ ಅಕೌಂಟ್ ಗೆ ಲಾಗಿನ್ ಮಾಡಿ ಅದನ್ನ ಪರಿಶೀಲಿಸ” ಅಂತಾ ಬಂದಲ್ಲಿ, ನೀವು ಅದರಂತೆ ಮಾಡದೆ, ಕೂಡಲೇ ನಿಮ್ಮ ಬ್ಯಾಂಕ್ ಗೆ ಅದನ್ನು ತಿಳಿಸಿ.
೫) ಈಮೇಲ್ ನ ಯಾವುದೇ ಲಿಂಕ್ ಗೂ ನಿಮ್ಮ ಕ್ರೆಡಿಟ್ ಕಾರ್ಡ್ ನಂಬರ್ ಕೊಡ ಬೇಡಿ.
ಕೊನೆಯದಾಗಿ, ನಿಮಗೆ ಹೊಸದಾಗಿ ಪರಿಚಯವಾದವರು ’ಎಂಜಾಯ್” ಅಂತ ಈಮೇಲ್ ಕಳಿಸಿದರೆ, ನಿಮಗಿಷ್ಟವಿಲ್ಲದಿದ್ದರೆ, ಮೆತ್ತಗೆ, ಕಸದ ಬುಟ್ಟಿಗೆ ವರ್ಗಾಯಿಸಿ. ಖಂಡಿತವಾಗಿಯೂ ಅವರಿಗೆ ಅಂತಹ ಈಮೇಲ್ 'ದಮ್ಮಯ್ಯ ಕಳಿಸ ಬೇಡ' ಅಂತಾ ಮಾತ್ರ ಹೇಳುವ ಮಹಾಪರಾಧ ಮಾಡಬೇಡಿ. ಆಮೇಲೆ, ಬಂದ ಈಮೇಲ್ ನಿಮಗಿಷ್ಟವಾದಲ್ಲಿ, ಯಾರಿಗೆ ಫಾರ್ವರ್ಡ್ ಮಾಡಿದರೂ, ನಿಮ್ಮ ದಮ್ಮಯ್ಯ, ನನಗೆ ಫಾರ್ವರ್ಡ್ ಮಾಡಬೇಡಿ. ಹಾಗು, ಫಾರ್ವರ್ಡ್ ಮಾಡುವಾಗ, ನಿಮಗೆ ಕಳಿಸಿದವರ ಈಮೇಲ್ ವಿಳಾಸವನ್ನು ಅಳಿಸಿಬಿಡಿ.
