Monday, October 4, 2010

ಶೂನ್ಯತೆ

ನಾವು ಮೂವತ್ತು ಅರೆಗಳ ಪೋಣಿಸಿ ಕರೆಯುವೆವು ಚಕ್ರವೆಂದು;
ಆದರೆ ಅದರಲ್ಲಿನ ಏನೂ ಇಲ್ಲದ ಖಾಲಿ ಜಾಗದ ಮೇಲೆ ಚಕ್ರದ ಉಪಯೋಗ ಆಧರಿಸಿದೆ.
ನಾವು ಮಣ್ಣ ಉಪಯೋಗಿಸಿ ಪಾತ್ರೆ ಮಾಡುವೆವು;
ಆದರೆ ಅದರೊಳಗಿನ ಏನೂ ಇಲ್ಲದ ಖಾಲಿ ಜಾಗದಿ ಅದರ ಉಪಯೋಗ ಅವಲಂಬಿಸಿದೆ.
ನಾವು ಬಾಗಿಲು ಕಿಟಿಕಿ ಕೊರೆದು ಮನೆ ಕಟ್ಟುವೆವು;
ಈ ಏನೂ ಇಲ್ಲದ ಖಾಲಿ ಜಾಗದಿ ಮನೆಯ ಉಪಯೋಗ ಅಧೀನವಾಗಿದೆ.
ಆದ್ದರಿಂದ ಹ್ಯಾಗೆ ಇರುವುದನ್ನ ಉಪಯೋಗಿಸುವೆವೊ,
ಅಂತೆಯೇ ಇಲ್ಲದಿರುವುದರ ಉಪಯೋಗವ ನಾವು ಮನಗಾಣ ಬೇಕು.


ಅನುವಾದ: ಭಾರತಿ ದೇವಿ
From: Tao Te Ching (Chap 11, English traslation Walley)