Sunday, December 26, 2010

ಹಾತೊರೆಯುವೆವು ನಾವು ಯಾವುದೋ ಚುಂಬನಕ್ಕೆ

ಜೀವನ ಪರ್ಯಂತದಿಂದ  ಹಾತೊರೆಯುವೆವು
ನಾವು ಯಾವುದೋ ವಿಶಿಷ್ಟ ಚುಂಬನಕ್ಕೆ, ಈ ದೇಹಕ್ಕೆ

ಆ ಚೇತನದ ವಿಶೇಷ ಸ್ಪರ್ಶಕ್ಕೆ. ಅಂಬುಧಿಯ ಜಲ
ಮುತ್ತಿನ ಚಿಪ್ಪನ್ನು ಒಡೆಯಲು ಬೇಡಿ ಕೊಂಡಂತೆ.

ಮತ್ತೆ ಲಿಲ್ಲಿ, ಭಾವೋದ್ದೀಪ್ತವಾಗಿ ಯಾವುದೋ
ಕಾಡು ಪ್ರೇಮಿಗಾಗಿ ಹಾತೊರೆಯುವಂತೆ! ರಾತ್ರಿಯಲ್ಲಿ

ನಾ ಕಿಟಿಕಿಯ ತೆರೆದು ಕೇಳಿ ಕೊಳ್ಳುವೆ
ಆ ಶಶಿ ಒಳಬಂದು ಆತನ ಮುಖವ

ನನ್ನ ಮುಖಕ್ಕೆ ಒತ್ತುವಂತೆ. ಉಸಿರಾಡು
ನನ್ನೊಳು. ಭಾಷೆಯ ಬಾಗಿಲ ಮುಚ್ಚಿ

ಪ್ರೇಮದ ಕಿಟಿಕಿಯ ತೆರೆ. ಆ ಚಂದ್ರ
ಬಾಗಿಲಿನಿಂದಲ್ಲ, ಕಿಟಿಕಿಯಿಂದ ಮಾತ್ರ ಬರುವ.


-ಕನ್ನಡಕ್ಕೆ- ಭಾರತಿ ದೇವಿ
From Soul of Rumi by Coleman Barks

© Bharathi Devi