ಸಮತೋಲನವಿಲ್ಲದ
ಹೊರೆಯ ಭಾಗ ನಾನು
ಬೀಳುವೆ ನಾ ಹುಲ್ಲ ಮೇಲೆ,
ಗುಹೆಯಲಿ ನಿದ್ದೆಹೋಗುವ ಮುದಿಯರಂತೆ,
ಮೇಯಲು ನಾ ಬಿದ್ದಲ್ಲೆ.
ನೂರಾರು ಸಾವಿರ ವರುಷಗಳು ನಾ ಧೂಳಿನ ಕಣಗಳಾಗಿದ್ದೆ
ಗಾಳಿ ಬೀಸಿದಂತೆ ತೇಲುತ್ತಾ ಹಾರುತ್ತಾ,
ಆಗಾಗ್ಯೆ ಮರೆಯುತ್ತಾ ಆ ಸ್ಥಿತಿಯಲಿ ನಾನೆಂದಾದರೂ ಇದ್ದೆ ಎಂದು,
ಆದರೆ ನಿದ್ರೆಯಲಿ ವಲಸೆ ಹೋಗುವೆ ಹಿಂದಕ್ಕೆ.
ನಾಕು ಕವಲಿನಿಂದ ಜಿಗಿಯುವೆ ನಾ
ಈ ಕಾಯುವ ಕೋಣೆಯಿಂದ ವಿಮೋಚನೆಯಾಗಿ,
ಕಾಲ ಮತ್ತು ಜಾಗಗಳ ಧಾಟಿ.
ಹೋಗುವೆ ನಾ ದೊಡ್ಡ ಹುಲ್ಲುಗಾವಲಿಗೆ
ಕರೆಯುವೆ ನಾ ಯುಗ ಯುಗಗಳ ಹಾಲ.
ಎಲ್ಲರೂ ಮಾಡುವರು ಇದರ ಹಲವಾರು ರೀತಿಗಳಲಿ.
ಪ್ರಜ್ನಾ ಪೂರ್ಣ ನಿರ್ಣಯಗಳು, ವೈಯ್ಯುಕ್ತಿಕ ನೆನಪುಗಳು
ವಾಸಿಸಲು ಬಹು ಇಕ್ಕಟ್ಟಾದ ಜಾಗಗಳೆಂಬ ಅರಿವಿಂದ,
ಹರಿಯುವನು ಪ್ರತಿಯೊಬ್ಬ ಮಾನವನು ತೊರೆಯಂತೆ
ಪ್ರತಿ ರಾತ್ರಿ ತನ್ನಿಷ್ಟದ ಎಲ್ಲೂ ಇಲ್ಲದ ಜಾಗಕ್ಕೆ, ಇಲ್ಲಾ
ವಿಲೀನವಾಗುವನು ಹಗಲಿಗೆ ಯಾವುದೋ ಕೆಲಸದಲಿ.
ಕನ್ನಡಕ್ಕೆ: ಭಾರತಿ ದೇವಿ
ಮೂಲ: (Mathnawi, VI 216-227) Rumi, 'We Are Three'
