ವಿಭಾಗ ೧
ಅಧ್ಯಾಯ ೧
- ಯಾವ ಕಟ್ಟಳೆಯ ತುಳಿದು ಹಾಕಬಹುದೋ ಅದು ಶಾಶ್ವತವಲ್ಲದ ಮತ್ತು ಬದಲಾಗುವ ಕಟ್ಟಳೆ. ಯಾವ ಹೆಸರನ್ನ ನಾಮಕರಣ ಮಾಡಬಹುದೋ ಅದು ಶಾಶ್ವತವಲ್ಲದ ಮತ್ತು ಬದಲಾಗುವ ಹೆಸರು.
- ಹೆಸರಿಲ್ಲದೇ ಹುಟ್ಟಿದ್ದು ಭೂಮ್ಯಾಕಾಶದ ಮೂಲಪ್ರವರ್ತಕ; ಹೆಸರಿನಿಂದ ಅದು ಎಲ್ಲದರ ಮಹಾತಾಯಿ.
- ಇರ ಬೇಕು ನಾವು ಸದಾ ಆಶೆ ರಹಿತವಾಗಿ ಅಗಾಧ ಮರ್ಮದ ಬಗ್ಯೆ ನಾವು ಮಾತಾಡಿದಲ್ಲಿ; ಆದರೆ ಸದಾ ಆಮಿಷ ತುಂಬಿದಲ್ಲಿ ನಮ್ಮೊಳು, ಅದರಂಚು ಮಾತ್ರ ನಮಗೆ ತೋರುವುದು.
- ಈ ಎರಡೂ ನೋಟಗಳು ನಿಜವಾಗಿಯೂ ಒಂದೇ; ಆದರೆ ಬೆಳೆದಂತೆಲ್ಲಾ ಅದಕ್ಕೆ ಬೇರೆ ಬೇರೆ ಹೆಸರು ಬರುತ್ತದೆ. ಜೊತೆಯಲ್ಲಿ ಅವನ್ನ ನಾವು ರಹಸ್ಯವೆನ್ನುತ್ತೇವೆ. ಎಲ್ಲದು ಅತ್ಯಂತ ಅಗಾಧವಾಗಿರುತ್ತದೋ ಅಲ್ಲಿ ಅದು ಸೂಕ್ಷ್ಮ ಹಾಗೂ ಅದ್ಭುತಗಳೆಲ್ಲದರ ದ್ವಾರವಾಗಿರುತ್ತದೆ.
ಕನ್ನಡಕ್ಕೆ: ಭಾರತಿ ದೇವಿ
ಮೂಲ: The Tao-te Ching By Lao-tzu
ಇಂಗ್ಲಿಷಿಗೆ: James Legge
