ನನ್ನ ಭಾವನೆಗಳ ಬಯಲಲ್ಲಿ
ನೀ ತುಳಿದು ತೂರಾಡಿದ ಹೃದಯದ
ತುಂಡು ತುಂಡೂ ಅಳುತಿವೆ.
ನಿನ್ನ ದೃಷ್ಟಿಯಲಿ ಕಳಕೊಂಡೆ ನಾ ನನ್ನನ್ನೆ.
ನನ್ನತನದ ಎತ್ತರದ ಗೋಪುರವ ಕಟ್ಟಿ,
ಆಳವಾದ ಧ್ಯೇಯಗಳ
ದೇವರ ಸ್ಥಾಪಿಸಿ ಪೂಜಿಸಿದ,
ನೀನೆಂತು ಅರಿಯಲು ಸಾಧ್ಯ
ನನ್ನನರಿಯದೆ?
ಹಾಗೂ,
ನೀನೆಂದು ಪ್ರಯತ್ನಿಸಿದೆ?
ನಿನಗೆಲ್ಲಿದೆ ಸಮಯ?
ನಿನಗೆಲ್ಲಿದೆ ಸಂಯಮ?
