ನನ್ನಲ್ಲಿಲ್ಲ ಭೂತದ ಭತ್ತಳಿಕೆ.
ನನ್ನಲ್ಲಿಲ್ಲ ಸಮರ್ಥನೆ ಕಳೆದ ಪ್ರತಿಯೊಂದು ಗಳಿಗೆಗೂ.
ಆಗಾಗ ಉಂಟಾಗುವ
ನನ್ನ ಕನಸನ್ನು ಹೂತು ಗೋರಿ ಕಟ್ಟುವ ದಿನಗಳಲಿ
ನನ್ನಲ್ಲಿಲ್ಲ ಭೂತದ ವಿಡಿಯೊ
ನನ್ನ ನಾ ಸಮರ್ಥಿಸಲು.
ಯಾಕಂದರೆ
ಪ್ರತಿ ಭಾರಿ ನನ್ನ ಕನಸನ್ನು ಗೋರಿಯಿಂದಗೆದು
ಪುನರ್ಜೀವ ಕೊಡಲೆತ್ನಿಸುವಾಗ
ನಾ ಹೂತಿದ್ದೇನೆ ಭೂತದ ಕಹಿ ನೆನಪ.
