ಯಾರಿಗೆ ಋಣಿಯಾಗಿರಲಿ ಈ ಜಿಗಿಯುವ ಮಧುರ ಭಾವನೆಗೆ
ಯಾವುದು ಹಗಲಿನಲಿ ನನ್ನೀ ಪಂಚೇಂದ್ರಿಯಗಳ ಜಾಗೃತಿ ಗೊಳಿಸಿ
ನಿದ್ರೆಯಲಿ ಛಂದೋಬದ್ಧತೆಯಲಿ ನಾವು
ಒಂದೇ ಲಯದಲಿ ಉಸಿರಾಡುವಂತೆ ಮಾಡಿಸುವುದೋ.
ಯಾವುದು ಪರಸ್ಪರ ದೇಹಗಳ ಕಂಪು ಹೊತ್ತ ಪ್ರಣಯಿಗಳು
ಮೌನದಲೇ ಒಂದೇ ಯೋಚನೆಗಳ ಯೋಚಿಸುವಂತೆ ಮಾಡುವುದೋ,
ಹಾಗೂ ಅದೇ ಅರ್ಥವಿಹೀನ ಮಾತುಗಳನಾಡಿಸುವುದೋ...
ಥಂಡಾಗಿಸದು ಸಿಡುಕಿನ ಶಿಶಿರದ ಕೊರೆ ಗಾಳಿ
ಬಾಡಿಸದು ಮೌನದ ರಣ ಬಿಸಿಲು
ನಮ್ಮದೇ ಆದ, ನಮ್ಮೀ ಒಲವಿನ ಹೂ ತೋಟದ ಗುಲಾಬಿಯ.
ಆದರೀ ಬಹಿರಂಗ ಅರ್ಪಣೆ ಇತರರಿಗೆ ಓದಲು:
ಅವು ನಿನಗೋಸುಗ ಅರುಹಿದ ನಮ್ಮ ಸ್ವಂತ ಮಾತುಗಳು.
- ಕನ್ನಡಕ್ಕೆ: 'ಶಿಶಿರ'
Original : A DEDICATION TO MY WIFE
By T.S. Eliot
