"ವಿಧಿಯು ಕೊಟ್ಟ ಎಲೆಯ ನಾವು ಬದಲಿಸಲಾರೆವು, ಆದರೆ ಅದನ್ನ ನಾವು ಹೇಗೆ ಆಡುತ್ತೇವೆ ಎಂಬುದು ಮಾತ್ರ ನಮಗೆ ಬಿಟ್ಟದ್ದು”- ರ‍್ಯಾಂಡಿ ಫೌಶ್ಶ್
ರ‍್ಯಾಂಡಿ ಫೌಶ್ಶ್ (Randy Pausch) ಇಂದಿಲ್ಲ. ಕಳೆದ ವರ್ಶ ಜುಲೈ ೨೭ ರಂದು ತನ್ನ ೪೭ ನೇ ವಯಸ್ಸಿನಲ್ಲಿ ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರಿಗೆ ತುತ್ತಾಗಿ ತೀರಿಹೋದರು. ತನ್ನ ಪತ್ನಿ ಜೈ ಹಾಗೂ ಮೂರು ಚಿಕ್ಕ ಮಕ್ಕಳನ್ನ ಅಗಲಿ ಹೋದರು. ಸೆಪ್ಟಂಬರ್ ೧೭, ೨೦೦೭ ನಂದು ಕಾರ್ನೀಗಿ ಮೆಲ್ಲನ್ ನ ಕಂಪ್ಯೂಟರ್ ವಿಜ್ನಾನದ ಪ್ರೊಫ಼ೆಸ್ಸರ್, ಹಾಗು ಹಳೆ ವಿದ್ಯಾರ್ಥಿಯಾದ ರ‍್ಯಾಂಡಿ ಫೌಶ್ಶ್ ರ ಕೊನೆಯ ಉಪನ್ಯಾಸಕ್ಕೆ ಇಡೀ ಲೋಕವೇ ಗಕ್ಕನೆ ನಿಂತು ಆಲಿಸಿತು. ನಂತರ ಮಿಲಿಯ ಗಟ್ಟಲೆ ಜನ ಇಂಟರ್ನೆಟ್ ನಲ್ಲಿ ಇದನ್ನ ನೋಡಿದರು. ಹಾಗೂ ಇದರ ಮೇಲಿನ ಪುಸ್ತಕವೊಂದು ಲೋಕದಾದ್ಯಂತ ೩೫ ಭಾಶೆಗಳಲ್ಲಿ ಬಿಡುಗಡೆಯಾಯಿತು. ಇಂದಿಗೂ ಜನ ಇದರ ಬಗ್ಯೆ ಮಾತಾಡುತ್ತಾರೆ ಹಾಗೂ ಇತ್ತೀಚಿಗೆ ಅಮೇರಿಕಾದ ಟಿವಿಯಲ್ಲಿ ಇವರ ಹಾಗೂ ಇವರ ಪತ್ನಿ ಜೈ ಯ ಬಗ್ಯೆ ಎರಡು ದಿನದ ಒಂದು ಕಾರ್ಯಕ್ರಮ ಪ್ರಸಾರವಾಯಿತು.
ಸಾಮಾನ್ಯವಾಗಿ ಎಲ್ಲಾ ಪ್ರೊಫ಼ೆಸ್ಸರುಗಳೂ ಕೊಡುತ್ತಾರೆ ಅದೇ ತಮ್ಮ ಕೊನೇಯದೆಂದು ಕಲ್ಪಿಸಿ ಕೊಡುವ ’ಕೊನೆಯ ಉಪನ್ಯಾಸ’. ಆದರೆ, ಆಗ ತಾನೆ ಅಂತ್ಯದ ಘಟ್ಟದಲ್ಲಿರುವ ಕ್ಯಾನ್ಸರ್ ಮತ್ತು ಇನ್ನು ಬರೆ ಮೂರರಿಂದ ಆರು ತಿಂಗಳು ಮಾತ್ರ ಅರೋಗ್ಯವಾಗಿ ಬದುಕುವ ಸಾಧ್ಯತೆ ಎಂದು ಗೊತ್ತಾಗಿರುವ ಅವರನ್ನ ಅವರ ಕೊನೆಯ ಉಪನ್ಯಾಸ ಕೊಡಲು ಕೇಳಿಕೊಂಡಾಗ ಅವರದನ್ನ ಕೊನೆಯೆದೆಂದು ಕಲ್ಪಿಸಬೇಕಾಗಿರಲಿಲ್ಲ. ಅದು ಕಟು ಸತ್ಯವಾಗಿತ್ತು. ಅವರು ಕೊಟ್ಟ ಉಪನ್ಯಾಸ ಮಾತ್ರ ಸಾವಿನ ಬಗ್ಯೆಯಾಗಿರಲಿಲ್ಲ, ಬದಲು ಬಾಲ್ಯದ ಕನಸ ನನಸು ಮಾಡುವುದರ ("Really Achieving Childhood Dreams") ಮೇಲಾಗಿತ್ತು. ಅವರು ಉಪನ್ಯಾಸಕ್ಕೆ ಬಂದು ನಿಂತಾಗ ನಾಲ್ನೂರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿದ್ದ ಅವರ ಸಹೋದ್ಯೋಗಿಗಳು, ವಿದ್ಯಾರ್ಥಿಗಳು ಎದ್ದು ನಿಂತು ಅವರಿಗೆ ದೀರ್ಘ ಕೈಚಪ್ಪಾಳೆಯ ಸನ್ಮಾನ ಮಾಡಿದರು. ’ನಾನಿದನ್ನು ಸಂಪಾದಿಸುವ ವರೆಗೂ ತಾಳಿ” ಎಂದು ಅವರಂದದ್ದಕ್ಕೆ, ’ನೀವಾಗಲೇ ಅದನ್ನ ಸಂಪಾದಿಸಿದ್ದೀರಿ’ ಎಂದು ಸಭೆಯ ಮೂಲೆಯಿಂದ ಉತ್ತರ ಬಂತು.
ಆ ಉಪನ್ಯಾಸ ಕೊಟ್ಟಾಗ ಇನ್ನೂ ಗಟ್ಟಿಮುಟ್ಟಾಗಿದ್ದ ಅವರು ಹಲವಾರು ಪುಶ್ ಅಪ್ ಮಾಡಿ ತಾನೆಷ್ಟು ಆರೋಗ್ಯವಾಗಿದ್ದೇನೆ ಎಂದು ತೋರಿಸಿದರು. ಅವರಲ್ಲಿ ಸ್ವಲ್ಪವಾದರೂ ಸ್ವಾನುಕಂಪವಿರಲಿಲ್ಲ. ಬದಲಾಗಿ, ಬದಲಾಗದ ಸತ್ಯವ ಎದುರಿಸುವ ನಿರ್ಧಾರವಿತ್ತು, ದಿಟ್ಟತನವಿತ್ತು. ಹಾಸ್ಯದ ಚುಟುಕಗಳಿಂದ ಮಿಶ್ರಿತವಾದ, ಕಂಪ್ಯೂಟರ್ ವಿಜ್ನಾನದ ಬಗ್ಯೆಯ ಒಳನೋಟ, ತಾಂತ್ರಿಕ ವಿದ್ಯಾಭ್ಯಾಸ, ಹಾಗೂ ವಿವಿಧ ಘಟಕಗಳ ಸಹಕಾರದ ಅವಶ್ಯಕತೆ, ಮತ್ತು ವಿವೇಕದ ನುಡಿಗಳಿಂದ ತುಂಬಿದ ಆ ಕೊನೆಯ ಉಪನ್ಯಾಸ ಒಂದು ಇಂಟರ್ನೆಟ್ ಸೆನ್ಸೇಶನ್ ಆಯಿತು. ಇವರ ಉಪನ್ಯಾಸ ಮುಗಿದಾಗ, Electronic Arts ನ ಸ್ಟೀವ್ ಬೋಲ್ಟ್ ಎಂಬವರು ಇವರು ಹಿತಚಿಂತಕರಾಗಿ ಮಹಿಳಾ ವಿದ್ಯಾರ್ಥಿಗಳಿಗೆ ಇತ್ತ ಬೆಂಬಲಕ್ಕೋಸ್ಕರ ಇವರ ನೆನಪಿನಲ್ಲಿ ಕಂಪ್ಯೂಟರ್ ಸಾಯನ್ಸ್ ನಲ್ಲಿ ಮಹಿಳಾ ವಿದ್ಯಾರ್ಥಿಗಳಿಗೆ ವಿಶೇಷ ಸ್ಕಾಲರ್ ಶಿಪ್ ಒಂದನ್ನು ಸೃಶ್ಟಿಸುವುದಾಗಿ ಆಶ್ವಾಸನೆ ಇತ್ತರು.
ಆ ಮೇಲೆ ಈ ಉಪನ್ಯಾಸ ಪುಸ್ತಕವಾಗಿ ಬಿಡುಗಡೆಯಾಗಿ, ಹಲವಾರು ಭಾಷೆಗಳಿಗೆ ಅನುವಾದಗೊಳಿಸಲ್ಪಟ್ಟು, ನ್ಯೂಯೋರ್ಕಿನ ಬೆಸ್ಟ್ ಸೆಲ್ಲರ್ ಲಿಸ್ಟಿನಲ್ಲಿ ಸೇರಿಕೋಂಡಿತು. ಈವತ್ತು ಇದನ್ನು ಯಾರೂ ಧರ್ಮಾರ್ಥ ಇಂಟರ್ನೆಟ್ ನಿಂದ ಇಳಿಸಿಕೊಳ್ಳಬಹುದು. ಈಗಾಗಲೇ ೧೦ ಮಿಲ್ಲಿಯಕ್ಕಿಂತಲೂ ಹೆಚ್ಚಿನ ಜನರಿಂದ ವೀಕ್ಷಿಸಲ್ಪಟ್ಟ ಯೂ ಟ್ಯೂಬಿನಲ್ಲಿಯೂ ನೋಡಬಹುದು. ಇದು ಕ್ರೂರವೆಂದನಿಸಿದರೂ, ಬಹುಶಃ ಪೌಶ್ಶರು ಕ್ಯಾನ್ಸರ್ ಬರದಿರುತ್ತಿದ್ದರೆ ಅವರ ಆ ಕೊನೆ ಉಪನ್ಯಾಸ ಮಾಡದಿದ್ದರೆ ಬರೇ ಅವರ ಕಂಪ್ಯೂಟರ್ ವಿಜ್ನಾನದ ಸಾಧನೆಯಿಂದ ಈ ರೀತಿ ಲೋಕದಾದ್ಯಂತ ಪ್ರಸಿದ್ಧಿಯಾಗುತ್ತಿರಲಿಲ್ಲವೇನೋ.
ಹುಟ್ಟಿದವರಿಗೆ ಸಾವು ನಿಷ್ಚಿತವಾದರೂ, ಸಾಯುವ ದಿನ ಗೊತ್ತಿಲ್ಲದಿರುವುದೇ ನಮಗೆ ಜೀವಿಸಲು ಇರುವ ಕಾರಣ. ಅಂತಾದ್ದರಲ್ಲಿ, ನಾವು ಇನ್ನು ೩ರಿಂದ ೬ ತಿಂಗಳು ಮಾತ್ರ ಬದುಕುವುದು ಎಂದು ಗೊತ್ತಾದ್ದಲ್ಲಿ ನಮ್ಮ ಮನಸ್ಸಿನ ಪ್ರತಿಕ್ರಿಯೆ ಹೇಗಿರಬಹುದು ಎಂದು ಊಹಿಸಲೂ ಅಸಾಧ್ಯ. ನಮ್ಮ ಕನಸಿನ ಗೋಪುರಗಳೆಲ್ಲಾ ಒಮ್ಮೆಲೆ ಜರಿದು ಬೀಳುವುದು. ತನ್ನ ಮೂವತ್ತೊಂಬತ್ತನೆಯ ವಯಸ್ಸಿನಲ್ಲಿ ಮದುವೆಯಾದ ಫೌಶ್ಶ್ ಗೆ ೨೦೦೬ ರ ಸೆಕೆಗಾಲದ ಅಂತ್ಯದ ದಿನಗಳಲ್ಲಿ ಕ್ಯಾನ್ಸರ್ ಎಂದು ಗೊತ್ತಾದಾಗ ಅವರ ಚಿಕ್ಕ ಮಗುವಿಗಿನ್ನೂ ೩ ತಿಂಗಳು, ಹಾಗೂ ದೊಡ್ಡದಕ್ಕೆ ೪ ವರ್ಷ.
’ಮೌನ ಹಂತಕ’ ಎಂದು ಹೆಸರಾದ, ಮೇದೊಜೀರಕ ಗ್ರಂಥಿಯ ಕ್ಯಾನ್ಸರ್ ಕ್ಯಾನ್ಸರುಗಳಲ್ಲೆಲ್ಲಾ ಅತ್ಯಂತ ಮಾರಕವಾದದ್ದು. ಇದರ ಮೊದಲಿನ ಅವಸ್ತೆಯಲ್ಲಿ ಏನೂ ರೋಗದ ಚಿಹ್ನೆಗಳಿಲ್ಲದೆ ಇರುವುದರಿಂದ ಇದನ್ನು ಗುರುತಿಸಲು ಬಹಳ ಕಷ್ಟ. ಚಿಹ್ನೆಗಳು ಕಾಣಿಸುವ ಸಮಯಕ್ಕೆ ಈ ರೋಗ ಬಹು ಮುಂದೆ ಹೋಗಿರುತ್ತದೆ. ಹಲವಾರು ಕಾರಣಗಳಿಂದ ಬರಬಹುದಾದ (ಹೆಚ್ಚಾಗಿ ಗಂಡಸರಿಗೆ, ಮದ್ಯಪಾನ, ಧೂಮ್ರಪಾನ, ಬೇರೆ ಕಾರಣಗಳಿಂದ ಈ ಗ್ರಂಥಿಗಳ ಉರಿಯೂತ, ಮಧುಮೇಹ, ಬೊಜ್ಜು, ಇತ್ಯಾದಿ), ಹೆಚ್ಚಿನ ಸಂಶೋಧನೆಗೆ ಒಳಗಾಗದ, ಈ ಕ್ಯಾನ್ಸರಿನಲ್ಲಿ ೫ ವರ್ಷದ ವರೆಗೆ ಬದುಕುವ ಸಾಧ್ಯತೆ ಕೇವಲ ೪%. ಅವರಲ್ಲಿ ೨೦% ದವರಿಗೆ ಮಾತ್ರ ಆಪರೇಶನ್ ಮಾಡುವ ಸಾಧ್ಯತೆ. ಅದರಲ್ಲಿ ಇವರು ಒಬ್ಬರಾಗಿದ್ದರು. ಇದರಿಂದ ಆಶಾದಾಯಕರಾಗಿ, ಹ್ಯೂಸ್ಟನಿನ ಲೋಕದಲ್ಲೇ ಅತ್ಯಂತ ಮುಂದುವರಿದ ಕ್ಯಾನ್ಸರ್ ಆಸ್ಪತ್ರೆಯಲ್ಲಿ ವಿಪ್ಪ್ಲ್ ಸರ್ಜರಿ (Whipple Surgery) ಯನ್ನ ಮಾಡಿಸಿ ಕೊಳ್ಳಲು ತೀರ್ಮಾನಿಸಿದರು. ಮುಂದೆ ಹಲವಾರು ಕೆಮೋತೆರಪಿ ಮತ್ತು ರೇಡಿಯೇಶನ್ ತೆರಪಿಗೆ ಒಳಗಾದ ಇವರು, ೨೦೦೭ ರ ಮಧ್ಯದ ಹೊತ್ತಿಗೆ ಬಹಳೆ ಚೇತರಿಸಿಕೊಂಡಿದ್ದರು. ಆದರೆ ಆಗಸ್ಟಿನಲ್ಲಿ ಕ್ಯಾನ್ಸರ್ ಮರುಕಳಿಸಿತು. ಅಲ್ಲದೇ ಈಗ ಪಿತ್ತಕೋಶ, ಗುಲ್ಮ ಹಾಗೂ ಶ್ವಾಸಕೋಶಕ್ಕೆಲ್ಲ ಪಸರಿಸಿ, ಇವರ ಉಳಿದ ಆಯುಸ್ಸನ್ನು ಖಚಿತಗೊಳಿಸಿತು.
ಇಂತಹ ವಿಧಿಯ ಮರಣ ದಂಡನೆಯ ಆ ಗಳಿಗೆಯಲ್ಲಿ ಅವರ ಮನಸ್ಥಿತಿ ಹೇಗಿರಬಹುದು? ಹಾಗಿರುವಾಗ ಇವರನ್ನ ಈ ಕೊನೆಯ ಉಪನ್ಯಾಸಕ್ಕೆ ಆಹ್ವಾನಿಸಲಾಯಿತು. ಆದರೆ ಅಂದು ಅವರಿತ್ತ ಉಪಾನ್ಯಾಸ ಮಾತ್ರ ಲೋಕದ ಮೂಲೆ ಮೂಲೆಯಲ್ಲಿರುವ ಪ್ರತಿಯೊಬ್ಬರಿಗೂ ಸ್ಪೂರ್ತಿ ಕೊಡುವಂತಾದ್ದಾಯಿತು. ಅದರ ವಿಷಯ: ’ನಿಮ್ಮ ಬಾಲ್ಯದ ಕನಸುಗಳನ್ನ ಹೇಗೆ ನಿಜವಾಗಿಸುವುದು’ ಪ್ರತಿಯೊಬ್ಬರೂ ಓದಲೇ/ನೋಡಲೇ ಬೇಕಾಗಿರುವ ಇವರ ಉಪಾನ್ಯಾಸದ ಬಗ್ಯೆಯ ಹೆಚ್ಚಿನ ವಿವರ ಅವರ ಈ ವೆಬ್ ಸೈಟಿನಲ್ಲಿದೆ.