ಮೂಲತಃ ಪರ್ಶಿಯನ್ ಭಾಷೆಯಲ್ಲಿರುವ ಓಮಾರ್ ಕಯ್ಯಾಮನ ರುಬಾಯಿಯತ್ ಹಲವಾರು ಭಾಷೆಗಳಲ್ಲಿ ಭಾಷಾಂತರ ಗೊಂಡಿವೆ: ಹಿಂದಿಗೆ ಮೈತಿಲಿ ಶರಣ್ ಗುಪ್ತ ಮತ್ತು ಹರಿವಂಶ್ ರೈ ಬಚ್ಚನ್ ಹಾಗೂ ಇಂಗ್ಲಿಷಿಗೆ ಹಲವಾರು ಜನ ತರ್ಜುಮೆಗೊಳಿಸಿದ್ದಾರೆ. ಅನುವಾದಗಳು ಸಾಮಾನ್ಯವಾಗಿ ಅನುವಾದಕರು ಕಯ್ಯಾಮನ ತಾತ್ವಿಕತೆಯನ್ನು ಅರಿತುಕೊಂಡ ರೀತಿಗನುಗುಣವಾಗಿ ತರ್ಜುಮೆ ಗೊಂಡಿರುತ್ತದೆ. ಕೆಲವರು ಈತನಲ್ಲಿ ನಾಸ್ತಿಕತೆ ಕಂಡುಕೊಂಡರೆ, ಇನ್ನು ಕೆಲವರು ಈತನ ದೈವಿಕತೆ ಕಾಣುತ್ತಾರೆ. ಇವರಲ್ಲಿ ಪ್ರಸಿದ್ಧಿಯಾದ ಎಡ್ವರ್ಡ್ ಫಿಟ್ಜೆರಾಲ್ಡ ನ ಇಂಗ್ಲಿಷ್ ಭಾಷಾಂತರದ ೫ ನೇ ಆವೃತ್ತಿಯನ್ನು ಆಧರಿಸಿ ಕನ್ನಡಾನುವಾದವನ್ನು ಇಂದಿನಿಂದ ಪ್ರಾರಂಭಿಸುತ್ತಿದ್ದೇನೆ.
ಓಮಾರ್ ಕಯ್ಯಾಮ (1048–1123) ನೊಬ್ಬ ದೊಡ್ಡ ಕವಿ, ಗಣಿತ ಶಾಸ್ತ್ರಜ್ಞ, ಹಾಗೂ ಖಗೊಳಜ್ಞನಾಗಿದ್ದ. ಅವನ ರುಬಾಯಿಯತ್ ಸಾಮಾನ್ಯವಾಗಿ ಚೌಪದಿಯಾಗಿದ್ದು, ಫಿಟ್ಜೆರಾಲ್ಡ ನ ಅನುವಾದದಲ್ಲಿ AABA ಎಂಬ ಅಂತ್ಯ ಪ್ರಾಸವಿದೆ. ಇದನ್ನು ನನ್ನ ಅನುವಾದದಲ್ಲೂ ಆದಷ್ಟು ಅನುಸರಿಸಲು ಪ್ರಯತ್ನಿಸುತ್ತೇನೆ. ರುಬಾಯಿಯತ್ ನ ಬಗ್ಯೆ ಹೆಚ್ಚಿನ ವಿವರಗಳಿಗೆ ಇಲ್ಲಿ ಹೋಗಿ.

೧
ಎದ್ದೇಳು! ರವಿಯಾಗಲೆ ಚದುರಿಸಿ ಓಡಿಸಿದ
ತನ್ನೆದುರಿನ ತಾರೆಗಳ ರಾತ್ರಿಯಂಗಳದಿಂದ,
ಅಟ್ಟಿದ ರಾತ್ರಿಯನ್ನೂ ಜೊತೆಗೆ ಸ್ವರ್ಗದಿಂದ, ಮತ್ತು
ಬೆಳಗಿದ ಸುಲ್ತಾನನ ಟೊಪಿಯ ಬೆಳಕಿನ ಕಿರಣದಿಂದ.
೨
ಮುಂಜಾವಿನ ಮಬ್ಬಿನ ಮಾಯಜಾಲವಿನ್ನೂ ಹರಡಿರೆ
ಕೇಳಿದಂತಾಯಿತು ಛತ್ರದಳೊಂದು ಕರೆ,
“ಹೊರಗ್ಯಾಕೆ ತೂಕಡಿಸಿಹ ಮಂಪರಿನ ಭಕ್ತ,
ದೇವಾಲಯದೊಳು ಎಲ್ಲಾ ಸನ್ನಾಹವಿರೆ?”
೩
ಬೊಬ್ಬಿರಿದರು ಜನ, ಕೋಳಿ ಕೋ ಕೋ ಎನ್ನುತಿರೆ,
ಪಥಿಕಾಶ್ರಮದ ಮುಂದು, "ಬಾಗಿಲು ತೆರೆ,"
“ನೋಡಿ, ನಮಗಿಲ್ಲಿಹ ಸಮಯ ಬಹಳ ಕ್ಷಣಿಕ,
ಬಾರೆವು ಮತ್ತೆ ಪುನಹ, ಒಮ್ಮೆ ಇಲ್ಲಿಂದ ಹೋದರೆ."
ಬೊಬ್ಬಿರಿದರು ಜನ, ಕೋಳಿ ಕೋ ಕೋ ಎನ್ನುತಿರೆ,
ಪಥಿಕಾಶ್ರಮದ ಮುಂದು, "ಬಾಗಿಲು ತೆರೆ,"
“ನೋಡಿ, ನಮಗಿಲ್ಲಿಹ ಸಮಯ ಬಹಳ ಕ್ಷಣಿಕ,
ಬಾರೆವು ಮತ್ತೆ ಪುನಹ, ಒಮ್ಮೆ ಇಲ್ಲಿಂದ ಹೋದರೆ."
೪
ಹೊಸವರುಶ ಹಳೆ ಆಕಾಂಕ್ಷೆಗಳ ಮತ್ತೆ ಚಿಗುರಿಸಿರೆ,
ವೈಚಾರಿಕ ಆತ್ಮವ ತನ್ನ ಏಕಾಂತಕ್ಕೆ ಸರಿಸಿರೆ,
ಎಲ್ಲಿ ಮೋಸಸಿನ ಬಿಳಿ ಕೈಯು ಚಾಚಿದೆಯೋ ರೆಂಬೆಯ,
ಎಲ್ಲಿ ಭುವಿಯಿಂದ ಕ್ರಿಸ್ತನು ಬಿಡುತಿಹನೋ ನಿಟ್ಟುಸಿರೆ.
ಹೊಸವರುಶ ಹಳೆ ಆಕಾಂಕ್ಷೆಗಳ ಮತ್ತೆ ಚಿಗುರಿಸಿರೆ,
ವೈಚಾರಿಕ ಆತ್ಮವ ತನ್ನ ಏಕಾಂತಕ್ಕೆ ಸರಿಸಿರೆ,
ಎಲ್ಲಿ ಮೋಸಸಿನ ಬಿಳಿ ಕೈಯು ಚಾಚಿದೆಯೋ ರೆಂಬೆಯ,
ಎಲ್ಲಿ ಭುವಿಯಿಂದ ಕ್ರಿಸ್ತನು ಬಿಡುತಿಹನೋ ನಿಟ್ಟುಸಿರೆ.
೫
ಹೋಗಾಯಿತು ಇರಾಮನು ತನ್ನೆಲ್ಲ ಗುಲಾಬಿಯೊಂದಿಗೆ
ಯಾರಿಗೂ ಗೊತ್ತಿಲ್ಲದೆಡೆ, ಜಮ್ಶಿದಿನ ಏಳು ಸುತ್ತಿನ ಲೋಟದೊಂದಿಗೆ,
ಆದರೂ ಹತ್ತಿದೆ ಕೆಂಪಗೆ ದ್ರಾಕ್ಷಾ ತೋಟಗಳು ಹಾಗೂ,
ಇನ್ನು ಹಲ ತೋಟಗಳು ನೀರ ಹೊಡೆತ ತಿಂದೆ.
ಹೋಗಾಯಿತು ಇರಾಮನು ತನ್ನೆಲ್ಲ ಗುಲಾಬಿಯೊಂದಿಗೆ
ಯಾರಿಗೂ ಗೊತ್ತಿಲ್ಲದೆಡೆ, ಜಮ್ಶಿದಿನ ಏಳು ಸುತ್ತಿನ ಲೋಟದೊಂದಿಗೆ,
ಆದರೂ ಹತ್ತಿದೆ ಕೆಂಪಗೆ ದ್ರಾಕ್ಷಾ ತೋಟಗಳು ಹಾಗೂ,
ಇನ್ನು ಹಲ ತೋಟಗಳು ನೀರ ಹೊಡೆತ ತಿಂದೆ.
೬
ಡೇವಿಡನ ತುಟಿ ಮುಚ್ಚಿವೆ; ದೈವಿಕ ಪೆಹ್ಲೆವಿಯಲ್ಲಿ
“ಮಧಿರೆ! ಮಧಿರೆ!ಮಧಿರೆ!” ಎನ್ನುತ ಎತ್ತರದ ಧ್ವನಿಯಲ್ಲಿ,
ಕರೆಯಿತು ಬುಲ್ ಬುಲ್ ಹಕ್ಕಿ, “ಕೆಂಪಗಿನ ಮಧುರೆ!”—
ಕೆಂಪೇರಿಸೆ ಗುಲಾಬಿಯ ಸೋತ ಕೆನ್ನೆಗಳಲ್ಲಿ.
೭
ಬಾ, ತುಂಬು ಲೋಟ, ಮತ್ತೆ ಎಸೆ ವಸಂತನ ಉರಿಗೆ
ಪಶ್ಚಾತಾಪದ ಚಳಿಯ ಉಡುಗೆ:
ಕಾಲವೆಂಬ ಹಕ್ಕಿಗಿದೆ ಬರೆ ಸ್ವಲ್ಪ ಸಮಯ
ರೆಕ್ಕೆ ಬಡಿಯೆ-ಹಾರಿತಾಗಲೇ ಹಕ್ಕಿ ಆಗಸದೆಡೆಗೆ.

೮
ನೈಶಾಪುರದಲ್ಲಿರಲಿ, ಇಲ್ಲಾ ಬ್ಯಾಬಿಲೋನಿನಲ್ಲಿರಲಿ,
ಲೋಟದಲಿ ಸಿಹಿಯಿರಲಿ ಇಲ್ಲಾ ಕಹಿಯಿರಲಿ,
ಒಸರುವುದು ಜೀವನದ ಮಧಿರೆಯು ಬಿಂದು ಬಿಂದುವಾಗಿಯೆ,
ತಾಳುವುದು ಜೀವನದ ಎಲೆಗಳು ಒಂದೊಂದಾಗುತಲಿ.
೯
ತರುವುದು ಪ್ರತಿ ಮುಂಜಾನೆ ಸಾಸಿರ ಹೂಗಳ, ನೀನನ್ನುವೆ:
ಹೌದು, ಆದರೆ ನಿನ್ನೆಯ ಹೂವನ್ನೆಲ್ಲಿ ಬಿಟ್ಟಿರುವೆ?
ಹಾಗೂ ಹೂವ ತರುವ ಈ ಸೆಖೆಗಾಲದ ಪ್ರಥಮ ತಿಂಗಳು
ಜಮ್ಶಿದ್ ಮತ್ತು ಕೈಕೋಬಾದನ್ನ ಕೊಂಡೊಯ್ಯುವುದಿಲ್ಲವೆ.

೧೦
ಆಗಲಿ, ಅವರ ಕೊಂಡೊಯ್ಯಲಿ! ನಮಗೇನು ಮಾಡಲಿದೆ
ಮಹಾನ್ ಕೈಕೋಬಾದ್ ಇಲ್ಲಾ ಕೈಖೋಸ್ರು ಜೊತೆಗೆ?
ಜ಼ಾಲ್ ಮತ್ತು ರುಸ್ತುಮರು ಅಬ್ಬರಿಸಲಿ ಸೊಕ್ಕಿಂದ,
ಇಲ್ಲಾ ಕರೆಯಲಿ ಹತೀಮನು ಊಟಕ್ಕೆ- ಗಮನಿಸದಿರು ನೀ ಆ ಕಡೆಗೆ.
ಆಗಲಿ, ಅವರ ಕೊಂಡೊಯ್ಯಲಿ! ನಮಗೇನು ಮಾಡಲಿದೆ
ಮಹಾನ್ ಕೈಕೋಬಾದ್ ಇಲ್ಲಾ ಕೈಖೋಸ್ರು ಜೊತೆಗೆ?
ಜ಼ಾಲ್ ಮತ್ತು ರುಸ್ತುಮರು ಅಬ್ಬರಿಸಲಿ ಸೊಕ್ಕಿಂದ,
ಇಲ್ಲಾ ಕರೆಯಲಿ ಹತೀಮನು ಊಟಕ್ಕೆ- ಗಮನಿಸದಿರು ನೀ ಆ ಕಡೆಗೆ.
ಇಂಗ್ಲಿಷ್: ಎಡ್ವರ್ಡ್ ಫಿಟ್ಜೆರಾಲ್ಡ್
ಕನ್ನಡಕ್ಕೆ: ಭಾರತಿ ದೇವಿ
© Bharathi Devi