೫೧
ಆತನ ರಹಸ್ಯ ಸಾನಿಧ್ಯ ಸೃಷ್ಟಿಯ ನರ ನಾಡಿಗಳಲ್ಲಿ ಹರಿದು
ಪಾದರಸದಂತೆ ನಿನ್ನೆಲ್ಲಾ ಪ್ರಯತ್ನಗಳಿಗೆ ಸಿಗದೆ ಜಾರಿಕೊಳ್ಳುವುದು;
ಚಂದ್ರನಿಂದ ಹಿಡಿದು ಮೀನಿನ ವರಗೆ ಎಲ್ಲಾ ರೂಪಗಳ ತಾಳಿ
ಎಲ್ಲಾ ಬದಲಾಗುತ್ತಾ ಅಳಿಯುವುದು -ಆತ ಮಾತ್ರ ಉಳಿದು;
೫೨
ಒಂದುವೇಳೆ ಊಹಿಸಿದರೆ ಕ್ಷಣವೇ -ನೆರಿಗೆಗಳ ಹಿಂದೆ ವಾಪಾಸು
ಕತ್ತಲಾವರಿಸುವುದು ಸುರುಳಿಟ್ಟ ನಾಟಕದ ಸುತ್ತಲು
ಇದನ್ನು, ತನ್ನ ಅನಂತ ಲೀಲೆಗಾಗಿ,
ಆತ ತಾನೇ ಕಲ್ಪಿಸಿ ಕೊಂಡು, ನಾಟಕವಾಡಿ, ನೋಡುವನು.
೫೩
ಆದರೆ ವ್ಯರ್ಥವಾದೊಡೆ, ಕೆಳಗಿನ ಈ ಬಗ್ಗದ
ಭೂಮಿಯ ನೆಲದಿಂದ ಮೇಲಿನ ಸ್ವರ್ಗದ ತೆರೆಯದ ಬಾಗಿಲ
ನೀನಿಂದು ದಿಟ್ಟಿಸಿ ನೋಡೆ, ನೀನಿಂದು ನೀನಾಗಿರಲು- ಹೇಗೆ
ಹಾಗಾದರೆ ನಾಳೆ, ಎಂದು ನೀನು ನೀನಾಗಿಲ್ಲದಿರುವಾಗ?
೫೪
ಪೋಲು ಮಾಡ ಬೇಡ ನಿನ್ನಾ ಸಮಯವ, ಬೆನ್ನಟ್ಟ ಬೇಡ
ವ್ಯರ್ಥವಾಗಿ ನಿರ್ದಿಷ್ಟವಿಲ್ಲದ ಉದ್ಯಮಗಳ ಹಾಗೂ ವ್ಯಾಜ್ಯಗಳ;
ಸಂತಸದಿಂದಿರುವುದು ಉತ್ತಮ ಫಲಕಾರಿ ದ್ರಾಕ್ಷಿಯೊಡನೆ,
ದುಃಖಿಯಾಗಿರುದಕ್ಕಿಂತ ಕಾಣದ, ಇಲ್ಲಾ ಕಹಿ, ಫಲಕ್ಕೊಸ್ಕರ.
೫೫
ನೋಡಿ ಗೆಳೆಯರೆ, ಎಂತಹ ಧೈರ್ಯದ ಕುಡಿತದ ಮೇಳದಿ
ಆಗಿಹೆ ನಾ ಎರಡನೇ ವಿವಾಹವ ಈ ನನ್ನ ಮನೆಯಲಿ;
ವಿಚ್ಛೇದಿಸಿಹೆ ಹಳೆಯ ಬಂಜೆ ವಿವೇಕಗಳ ನನ್ನ ಹಾಸಿಗೆಯಿಂದ,
ಮತ್ತು ತಂದಿಹೆ ದ್ರಾಕ್ಷಾಬಳ್ಳಿಯ ಮಗಳ ನನ್ನ ಪತ್ನಿಯಾಗಿ.
<< ಹಿಂದೆ -------------------------------------------------- ಮುಂದೆ >>
ಇಂಗ್ಲಿಷ್: ಎಡ್ವರ್ಡ್ ಫಿಟ್ಜೆರಾಲ್ಡ್
ಕನ್ನಡಕ್ಕೆ: ಭಾರತಿ ದೇವಿ ಮತ್ತು ಮಧುರ್ ಆತ್ರೇಯ
© Bharathi Devi
