Sunday, November 1, 2009

ಒಮಾರ್ ಕಯ್ಯಾಮನ ರುಬಾಯಿಯತ್ (೧೧)

೯೧
ಆಹಾ, ಒದಗಿಸಿ ದ್ರಾಕ್ಷಿಯ ನನ್ನ ನಶಿಸುವ ಜೀವಕ್ಕೆ,
ಮತ್ತೆ ತೊಳೆಯಿರಿ ದೇಹವ ನನ್ನ ಜೀವ ಗತಿಸಿದ ಮೇಲೆ,
ಮಲಗಿಸಿ ನನ್ನ, ಚೈತನ್ಯಪೂರ್ಣ ಎಲೆಗಳ ಹೊದಿಸಿ,
ಯಾವುದೇ ನಿರ್ಜನವಲ್ಲದ ಒಂದು ಉದ್ಯಾನದ ಬದಿಗೆ.

೯೨
ಹೂಳಿದ ಬೂದಿಯೂ ಸಿಕ್ಕಿ ಹಾಕಿಕೊಂಡಿದೀ
ದ್ರಾಕ್ಷಾರಸ ಗಾಳಿಯಲಿ ಮೇಲೆ ಎಸೆಯುವ ಪಾಶದಿ
ಪಕ್ಕದಿ ಹಾದುಹೋಗುವ ಭಕ್ತರಲ್ಲದವರೂ
ತುತ್ತಾಗುವರು ಇದರ ವಶಕ್ಕೆ ಅರಿವಿಲ್ಲದೆ ಹಟಾತ್ತಾಗಿ.

೯೩
ನಿಜದಲ್ಲಿ ನಾ ಆಷ್ಟು ದಿನ ಆರಾಧಿಸಿದ ಮೂರ್ತಿಗಳೆಲ್ಲ
ಮಾಡಿವೆ ಈ ಲೋಕದಿ ನನ್ನ ಗೌರವಕ್ಕೆ ಬಹಳ ಕೆಡುಕ:
ನನ್ನ ಕೀರ್ತಿಯ ಮುಳುಗಿಸಿವೆ ಆಳವಿಲ್ಲದ ಲೋಟದಿ ,
ಮತ್ತೆ ಮಾರಿವೆ ನನ್ನ ಪ್ರತಿಷ್ಠೆಯ ಬರೇ ಒಂದು ಹಾಡಿಗೆ ಮಾತ್ರ.

೯೪
ನಿಜ, ನಿಜ, ಪದೇ ಪದೇ ಪಶ್ಚಾತ್ತಾಪಿಸ ಬೇಕು ನಾ ಆಣೆ ಇಡುವ
ಮೊದಲು-ಆದರೆ ಅಮಲೇರಿರಲಿಲ್ಲವೇ ನಾ ಆಣೆಯಿಟ್ಟಾಗ?
ಮತ್ತೆ ಅಷ್ಟರಲ್ಲೆ ಬಂತು ವಸಂತ, ಕೈಯಲ್ಲಿ ಗುಲಾಬಿಯೊಂದಿಗೆ
ಹರಿದು ಚೂರಾಯಿತು ನನ್ನ ಚಿಂದಿಯಾಗಿದ್ದ ಪಶ್ಚಾತ್ತಾಪ.

೯೫
ಮತ್ತೆ ಸುರೆಯು ಧರ್ಮ ಬಾಹಿರವಾಗಿ ಆಡಿರಬಹುದು,
ಹಾಗೂ ನನ್ನ ಮರ್ಯಾದೆಯ ಅಂಗಿಯ ಸುಲಿದಿರಲೂ ಬಹುದು,
ಆದರೆ, ಆಗಾಗ ಅಚ್ಚರಿ ಪಡುವೆ ಮದ್ಯದ ವ್ಯಾಪಾರಿಗಳು ಏನ ಖರೀದಿಸ ಬಹುದು
ಅವರು ಮಾರುವ ವಸ್ತುವಿನಷ್ಟು ಅಮೂಲ್ಯದ ಅರ್ಧದಷ್ಟಾದರೂ.

೯೬
ಆದರೂ, ಅಯ್ಯೋ, ವಸಂತನು ಗುಲಾಬಿಯೊಂದಿಗೆ ಮಾಯವಾಗುವನು!
ಯೌವನದ ಸುಗಂಧಿತ ಹಸ್ತಪ್ರತಿಯು ಅಂತ್ಯವ ಕಾಣುವುದು!
ಮರದ ರೆಂಬೆಗಳಲ್ಲಿ ಹಾಡಿದ ಬುಲ್ ಬುಲ್ ಹಕ್ಕಿಯು,
ಹಾ, ಎಲ್ಲಿಂದ, ಮತ್ತು ಎಲ್ಲಿಗೆ ಹಾರಿತು ಪುನಹ, ಯಾರಿಗೆ ಗೊತ್ತು!

೯೭
ಮರುಭೂಮಿಯು ತನ್ನ ನೀರಿನ ಸೆಲೆಯ ಬಿಟ್ಟು ಕೊಟ್ಟಲ್ಲಿ
ಒಂದೇ ನೋಟ-ಮಸುಕಾಗಿಯಾದರೂ, ತೋರ್ಪಡಿಸಿದಲ್ಲಿ,
ಅದರ ಕಡೆ ಮೂರ್ಛೆ ಹೋಗುವ ಪ್ರಯಾಣಿಕ ಜಿಗಿಯಬಹುದು,
ತುಳಿದಾಡಿದ ಗಿಡಮೂಲಿಕೆಗಳು ಮತ್ತೆ ಚಿಗುರುವಂತೆ ಬಯಲಲ್ಲಿ!

೯೮
ರೆಕ್ಕೆಯಿದ್ದ ದೇವತೆಯೊಬ್ಬ ತಡವಾಗುವ ಮೊದಲೇ
ಇನ್ನೂ ಬಿಚ್ಚದ ವಿಧಿಯ ಸುರುಳಿಯ ತಡೆ ಹಿಡಿಯುವನೇ,
ಹಾಗೂ ಆ ನಿಷ್ಠುರ ನ್ಯಾಯಾಧೀಶ ಬೇರೆಯೇ ದಾಖಲು
ಮಾಡುವಂತೆ, ಇಲ್ಲಾ ಅಳಿಸಿ ಹಾಕುವಂತೆ ಮಾಡುವನೇ!

೯೯
ಅಹ ಪ್ರೇಮ! ನೀನು ಮತ್ತು ನಾನು ಒಳಸಂಚು ಮಾಡಲಾಗುತ್ತಿದ್ದರೆ
ಅವನೊಡನೆ ಈ ಕಡು ಹೀನ ವ್ಯವಸ್ತೆಯ ಪೂರ್ತಿಯಾಗಿ ಗ್ರಹಿಸೆ,
ಆಗ ನಾವದನ್ನ ಒಡೆದು ಪುಡಿಪುಡಿ ಮಾಡಿ- ಆ ಮೇಲೆ
ಪುನರ್ರೂಪಿಸುವುದಿಲ್ಲವೇ ನಮ್ಮ ಹೃದಯದ ಆಕಾಂಕ್ಷೆಯಂತೆ!

೧೦೦
ನಾಡಿದ್ದು ಉದಯಿಸುವ ಚಂದ್ರ ನಮ್ಮ ಹುಡುಕಬಹುದು ಪುನಹ-
ಇನ್ಮುಂದೆ ಎಷ್ಟುಸಲ ಆಕೆ ವರ್ಧಿಸುವುದಿಲ್ಲ ಮತ್ತು ಕ್ಷೀಣಿಸುವುದಿಲ್ಲ;
ಇನ್ಮುಂದೆ ಎಷ್ಟುಸಲ ಉದಯಿಸುತ್ತಾ ನಮ್ಮ ಹುಡುಕುವುದಿಲ್ಲ
ಇದೇ ಉದ್ಯಾನದ ಮೂಲಕ-ಆದರೆ ಪ್ರಯೋಜನವಿಲ್ಲದೇ ಒಬ್ಬರ ಮಾತ್ರ!

೧೦೧
ಮತ್ತೆ ಅವಳಂತೆ, ಓ ಸಖಿ, ನೀನೂ ಹಾದು ಹೋಗುವೆ
ಹುಲ್ಲ ಮೇಲೆ ತಾರೆಗಳು ಚೆಲ್ಲಿದಂತಿರುವ ಅತಿಥಿಗಳ ಮಧ್ಯೆ,
ನಿನ್ನಾನಂದದ ಆ ಚಿಕ್ಕ ಪರ್ಯಟನದಲ್ಲಿ ತಲುಪ ಬಹುದು ನೀ
ನಾ ಮಾಡಿದ ಒಂದು ಜಾಗ- ಕವುಚಿಡು ಒಂದು ಖಾಲಿ ಲೋಟ ಅಲ್ಲೇ!

&&&&&&&&&&&&&&&&&&&&&&&&&&&&&&&

<< ಹಿಂದೆ  ......................................... ಮೊದಲಿಗೆ  >>

ಇಂಗ್ಲಿಷ್: ಎಡ್ವರ್ಡ್ ಫಿಟ್ಜೆರಾಲ್ಡ್
ಕನ್ನಡಕ್ಕೆ: ಭಾರತಿ ದೇವಿ ಮತ್ತು ಮಧುರ್ ಆತ್ರೇಯ
Note: This is the last of the series on the translation of 
The Rubaiyat of Omar Khayyam by Edward Fitzgerald.
© Bharathi Devi