Thursday, November 11, 2010

ನಮ್ಮೀ ಶೂನ್ಯತೆಯ ಪ್ರೇಮದಿ ತುಂಬಿಹ ಜಗತ್ತು

ನಮ್ಮಿರುವಿಕೆಯ ಒರೆಸಿಹಾಕುವ ಶೂನ್ಯತೆ ಸ್ತುತ್ಯ. ಅಸ್ತಿತ್ವ:
ಇದು ನಮ್ಮಾ ಶೂನ್ಯತೆಯ ಪ್ರೇಮದಿಂದುಂಟಾದ ಜಾಗ!

ಆದರೂ ಹೇಗೋ ತೂರಿ ಬರುವುದು ಖಾಲಿತನ,
ಜಾರಿ ಹೋಗುವುದು ನಮ್ಮೀ ಅಸ್ತಿತ್ವ.

ಪ್ರಶಂಸಿಸು ಆ ಘಟನೆಯ ಪುನಹ ಪುನಹ!
ವರ್ಷಗಟ್ಟಲೆ ಸೆಳೆದಿದ್ದೇನೆ ನನ್ನ ಇರುವಿಕೆಯ ಈ ಶೂನ್ಯದಿಂದ.

ಅಷ್ಟರಲ್ಲೇ ಒಮ್ಮೆಲೇ ಎರಗಿದ  ಆ ತೋಳಿನ ಒಂದೇ ಹೊಡೆತದಿಂದ
ಮುಗಿಯಿತು ಆ ಎಲ್ಲ ಕೆಲಸ.

ವಿಮುಕ್ತನಾದೆ ನನ್ನಿಂದ, ನನ್ನ ಇರುವಿಕೆಯಿಂದ, ಭಯಂಕರ ಹೆದರಿಕೆಗಳಿಂದ, ನಂಬಿಕೆಗಳಿಂದ,
ಬಿಡುಗಡೆಯಾದೆ ಪರ್ವತಮಯ ಇಚ್ಛೆಗಳಿಂದ.

’ಇಲ್ಲಿ’ ಮತ್ತು ’ಈಗ’ ಎಂಬ ಪರ್ವತವು ಶೂನ್ಯದೆಡೆ ಹಾರಿ ಹೋಗುವ
ಹುಲುಕಡ್ಡಿಯ ಬರೇ ಚಿಕ್ಕ ತುಂಡು ಮಾತ್ರ.

ನಾನನ್ನುತ್ತಿರುವ ಈ ಎಲ್ಲಾ ಪದಗಳು ಅರ್ಥ ವಿಹೀನವಾಗ ಹತ್ತಿವೆ:
ಅಸ್ತಿತ್ವ, ಶೂನ್ಯತೆ, ಪರ್ವತ, ಹುಲುಕಡ್ಡಿ-

ಈ ಪದಗಳು ಮತ್ತು ಅವು ಹೇಳಲು ಏನ ಯತ್ನಿಸುವುವು ಎಂಬವೆಲ್ಲಾ
ತೂರಿ ಹೋಗಿವೆ ಕಿಟಿಕಿಯಿಂದ, ಓರೆಯ ಸೂರಿನ ಕೆಳಗಿನಿಂದ.


ಕನ್ನಡಕ್ಕೆ: ಭಾರತಿ ದೇವಿ
ಮೂಲ: Teachings of Rumi